
ಮೇ ತಿಂಗಳಲ್ಲಿ ಸಾಗರ ಪೇಟೆಯಲ್ಲಿ ನಡೆದ ಗೋವುಗಳ ಕಳ್ಳತನ ಪ್ರಕರಣವನ್ನು ಪೊಲೀಸ್ ಇಲಾಖೆ ಬಗೆಹರಿಸಿದೆ. ಹಸುಗಳನ್ನು ಕಸಾಯಿಖಾನೆಗೆ ಕಳ್ಳತನ ಮಾಡಿ ಸಾಗಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ರೂ.10,00,000 ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನು ಜಪ್ತಿ ಮಾಡಿದ್ದಾರೆ.

ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಎನ್. ನಗರದಲ್ಲಿನ ಆಶ್ರಮ ಶಾಲೆ ಹಿಂಭಾಗದಲ್ಲಿ ಮೇ 27 ರಂದು ದನ ಕಳ್ಳತನ ನಡೆದಿದೆ ಎಂದು ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಪತ್ತೆ ಹಚ್ಚಲು ಜಿಲ್ಲಾಧಿಕಾರಿ ಮಿಥುನ್ ಕುಮಾರ್ ಮತ್ತು ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮ್ ರೆಡ್ಡಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಸಾಗರದ ಡಿವೈಎಸ್ಪಿ ಗೋಪಾಲ ಕೃಷ್ಣ ಟಿ. ನಾಯಕ್ ಅವರ ನೇತೃತ್ವದಲ್ಲಿ ಕಾರ್ಗಲ್ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಶೆಟ್ಟಿ ಮತ್ತು ಪಿಎಸ್‌ಐ ಯಲ್ಲಪ್ಪ ಟಿ. ಹಿರೇಗಣ್ಣನವರ್ ಮತ್ತು ಶ್ರೀ ನಾಗರಾಜ ಟಿ. ಎಂ. ರವರ ನೇತೃತ್ವದಲ್ಲಿ ಅಪರಾಧ ವಿಭಾಗದ ಅಧಿಕಾರಿಗಳು ಸೇರಿ ತಂಡವನ್ನು ರಚಿಸಿದರು.
ಈ ತಂಡದಲ್ಲಿ ಹೆಡ್ ಕಾಂಸ್ಟೆಬಲ್‌ಗಳು ಸನಾವುಲ್ಲಾ, ಶೇಕ್ ಫೈರೋಜ್ ಮತ್ತು ಸಿಪಿಸಿಗಳು ವಿಕಾಸ್, ರವಿಕುಮಾರ್, ಕೃಷ್ಣಮೂರ್ತಿ, ವಿಶ್ವನಾಥ ಸೇರಿದಂತೆ ಹಲವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.