
ಶಿವಮೊಗ್ಗ ಜಿಲ್ಲೆಯ ಹೊಳೆ ಅಂಚೆ ಅಗಸವಳ್ಳಿ ಹೊಸೂರು ನಿವಾಸಿ ಮುನಿರಂಗೇಗೌಡ.ಎನ್., ತಮ್ಮ ತಾತ ಶ್ರೀ ರಂಗಪ್ಪ ಬಿನ್ ಲೇಟ್ ಕರಿಗುಡ್ಡೆಗೌಡ ಅವರ ಮರಣದ ನಂತರ, ಅವರ 2 ಎಕರೆ ಜಮೀನು ಅಜ್ಜಿ ಶ್ರೀಮತಿ ರಂಗಮ್ಮ ಅವರ ಹೆಸರಿಗೆ ಪೌತಿ ಖಾತೆ ಮಾಡಿಸಲು, ಶಿವಮೊಗ್ಗ ತಾಲ್ಲೂಕು ಕಸಬಾ-1 ಹೋಬಳಿ, ಅಗಸವಳ್ಳಿ ಗ್ರಾಮದಲ್ಲಿರುವ ತಮ್ಮ ಆಸ್ತಿಯ ಸಂಬಂಧ ಅರ್ಜಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ, ಕಸಬಾ-1 ರ ಗ್ರಾಮ ಲೆಕ್ಕಾಧಿಕಾರಿ ಶ್ರೀ ಸಂಜಯ್ ಮೋಹಿತೆ ಎಸ್.ಆರ್. ಅವರು, ಪೌತಿ ಖಾತೆ ಮಾಡಿಕೊಡಲು 25,000 ರೂ. ಲಂಚದ ಬೇಡಿಕೆ ಇಟ್ಟರು. ಮುನಿರಂಗೇಗೌಡ ಈ ಬೇಡಿಕೆಯನ್ನು ಮೊಬೈಲ್‌ನಲ್ಲಿ ಧ್ವನಿಮುದ್ರಿಸಿ, ಲೋಕಾಯುಕ್ತ ಠಾಣೆಗೆ ದೂರು ನೀಡಿದರು.
ಇಂದು ಸಂಜೆ 5:15ರ ಸಮಯದಲ್ಲಿ, ಶಿವಮೊಗ್ಗದ ಹಳೇ ಜೈಲು ಆವರಣದಲ್ಲಿರುವ ಗ್ರಾಮ ಆಡಳಿತ ಕಚೇರಿಯಲ್ಲಿ, ಗ್ರಾಮ ಲೆಕ್ಕಾಧಿಕಾರಿ ಲಂಚದ ಹಣ ಸ್ವೀಕರಿಸುತ್ತಿರುವ ವೇಳೆ, ಲೋಕಾಯುಕ್ತ ಪೊಲೀಸ್ ತಂಡ ದಾಳಿ ನಡೆಸಿತು. ಈ ದಾಳಿಯಲ್ಲಿ, ಲಂಚದ ಹಣವನ್ನು ಜಪ್ತಿ ಮಾಡಲಾಗಿದ್ದು, ಅಪರಾಧಿ ಸರ್ಕಾರಿ ನೌಕರನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ.
ಈ ಕಾರ್ಯಾಚರಣೆಯ ನೇತೃತ್ವವನ್ನು ಲೋಕಾಯುಕ್ತ ಎಸ್ಪಿ ಮಂಜುನಾಥ ಚೌದರಿ ಎಂ.ಎಚ್. ಅವರ ನೇತೃತ್ವದಲ್ಲಿ . ಕರ್ತವ್ಯ ನಿರ್ವಹಿಸಿದ ತಂಡದಲ್ಲಿ ಇನ್ಸ್‌ಪೆಕ್ಟರ್ ಶ್ರೀ ಹೆಚ್.ಎಸ್. ಸುರೇಶ್, ಮತ್ತು ಸಿಬ್ಬಂದಿಗಳಾದ ಯೋಗೇಶ್, ಟೀಕಪ್ಪ, ಸುರೇಂದ್ರ, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್.ದೇವರಾಜ್, ಪುಟ್ಟಮ್ಮ, ಗಂಗಾಧರ, ಪ್ರದೀಪ್, ಜಯಂತ್ ಮತ್ತು ತರುಣ್ ಕುಮಾರ್ ಅವರು ಪಾಲ್ಗೊಂಡಿದ್ದರು…