
ಬೆಂಗಳೂರು :
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16,50,000 ರೂಪಾಯಿ ಲಂಚ ಪ್ರಕರಣದ ಕಾರ್ಯಾಚರಣೆಯನ್ನು ಪೊಲೀಸರು ಯಶಸ್ವಿಯಾಗಿ ಬೇದಿಸಿದ್ದಾರೆ . ಸ್ಥಳೀಯ ಪೊಲೀಸ್ ಇಲಾಖೆಯ ಅದೀಕ್ಷಕರಾದ ಶ್ರೀ ಪವನ್ ನೆಟ್ಟೂರು ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಪೊಲೀಸರು ಆರೋಪಿಗಳ ಮೇಲೆ ಧಾಳಿ ನಡೆಸಿ ಭ್ರಷ್ಟಾರ ಎಡೆಮುರಿ ಕಟ್ಟಿದ್ದಾರೆ . ಈ ಕಾರ್ಯಾಚರಾಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಶ್ರೀ ರಮೇಶ್ ಮತ್ತು ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು

ಬೊಮ್ಮನಹಳ್ಳಿ ಗ್ರಾಮದ ಸರ್ವೇ ನಂ 101/33,149 ಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಲೇಔಟ್‌ಗೆ ವಿದ್ಯುತ್ ಸಂಪರ್ಕ ನೀಡಲು, ಶ್ರೀ ಚಕ್ರ ಎಲೆಕ್ಟ್ರಿಕಲ್‌ನ ವಿಜಯ್ ಕುಮಾರ್ ಅವರ ಹತ್ತಿರ 16,50,000 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ AEE ಮತ್ತು JE ಬೆಸ್ಕಾಂ ಅಧಿಕಾರಿಗಳು.
24.10.2024 ರಂದು, ಶ್ರೀ ವಿಜಯ್ ಕುಮಾರ್ ರವರು ಬೆಸ್ಕಾಂ ಅಧಿಕಾರಿಗಳಿಗೆ ಲಂಚವನ್ನು ನೀಡಲು ಬೊಮ್ಮನಹಳ್ಳಿಯ ನ್ಯೂ ಪ್ರೆಷ್ ಮಾರ್ಟ್ ಬಳಿ ಬಂದಾಗ, ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, JE ನಾಗೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಲಂಚ ಸ್ವೀಕರಿಸುವಾ ಸ್ಥಳದಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಕುರಿತು ತಪ್ಪಿತಸ್ಥರ ವಿರುದ್ಧ ಪ್ರಕರಣ ಧಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.