March 14, 2025

ಚಾಲಕನ ಅಟ್ಟಹಾಸ: ಕಾರು ನಿಲ್ಲಿಸಲು ಸೂಚಿಸಿದ ಪೊಲೀಸ್ ಸಿಬ್ಬಂದಿಯ ಮೇಲೆ ಕಾರು ಒಡೆದ ಚಾಲಕ…

ಶಿವಮೊಗ್ಗ :

Spread the love

ಇಂದು ಸಹ್ಯಾದ್ರಿ ಕಾಲೇಜು ಬಳಿ  , ಪೂರ್ವ ಸಂಚಾರಿ ಪೊಲೀಸರ ತಂಡವು ವಾಹನ ತಪಾಸಣೆ ನಡೆಸುತ್ತಿದ್ದಾಗ,ಸಿಬ್ಬಂದಿಯು  ಕಾರು ನಿಲ್ಲಿಸಲು ಸೂಚಿಸಿದಾಗ, ಚಾಲಕ ಸಿಬ್ಬಂದಿಯ ಸೂಚನೆಯನ್ನು ಪಾಲನೆಯೇ ಮಾಡದೆ, ಪೊಲೀಸರು ಕಾರಿನ ಬ್ಯಾನೆಟ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ.



ತಪಾಸಣೆ ವೇಳೆ ಟ್ರಾಫಿಕ್ ಸಿಬ್ಬಂದಿ ಕಾರಿನ ಮುಂದೆ ಬಂದು ಕಾರು ನಿಲ್ಲಿಸಲು ಸೂಚಿಸುತ್ತಿದ್ದಾಗ, ಚಾಲಕ ಕಾರನ್ನು ಅವರ ಮೇಲೆ ಹತ್ತಿಸಲು ಯತ್ನಿಸಿದ್ದಾನೇ ಅದೃಷ್ಟ ವಶತ್ ಸಿಬ್ಬಂದಿಯು ಕಾರಿನ ಭಾನೆಟ್ ಮೇಲೆ ಬೀಳುತ್ತಾರೆ ನಂತರ , 100 ಮೀಟರ್‌ಗೂ ಹೆಚ್ಚು ಕಾರು ಚಾಲನೆ ಮಾಡಿರುತ್ತಾನೆ, ನಿರ್ಣಾಯಕವಾಗಿ ಪಾರಾದ ಪೊಲೀಸ್ ಸಿಬ್ಬಂದಿ ಪ್ರಭು,

ಕಿಯಾ ಸೊನೆಟ್ ಕಾರೆಂದು ಗುರುತಿಸಲಾಗಿದೆ  ಕಾರಿನಲ್ಲಿ ಬಂದವನನ್ನು ಭದ್ರಾವತಿಯ ಕೇಬಲ್ ಆಪರೇಟರ್ ಎಂದು ಗುರುತಿಸಲಾಗಿದೆ.

ಈ ಸಂಬಂಧ ಚಾಲಕನ ವಿರುದ್ಧ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.