March 14, 2025

ಚಿತ್ರದುರ್ಗ ನೇರಲಗುಂಟೆ ಗ್ರಾ. ಪಂ.PDO ಅಮಾನತು, ಹೊಸ ಶ್ರೇಣಿಯ ಕಾರ್ಯದರ್ಶಿಗೆ ಪ್ರಭಾರ,

Spread the love

ಚಿತ್ರದುರ್ಗ :

ಚಳ್ಳಕೆರೆ ನೇರಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಿಡಿಒ ಎಸ್. ಹನುಮಂತಕುಮಾರ್ 2024ರ ಸೆಪ್ಟೆಂಬರ್ 30 ರಿಂದ ಅನಧಿಕೃತವಾಗಿ ಕಚೇರಿ ಕರ್ತವ್ಯಕ್ಕೆ ಗೈರು ಹಾಜರಾಗಿರುವುದು ವರದಿಯಾಗಿದ್ದು, ಸಾರ್ವಜನಿಕ ಮತ್ತು ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಇದರಿಂದ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ, ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು pdo ವಿರುದ್ಧ  ದೂರು ನೀಡಲು ಮುಂದಾಗಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ, ಗ್ರೇಡ್-1 ಕಾರ್ಯದರ್ಶಿ ಕೆ.ಎಸ್. ಜಯಣ್ಣ ಅವರಿಗೆ ಪ್ರಭಾರ ಕಾರ್ಯದರ್ಶಿ ಹುದ್ದೆ ನೀಡಲು ಜಿಲ್ಲಾ ಪಂಚಾಯಿತಿ CEO ವತಿಯಿಂದ ಆದೇಶ ಕೈಗೊಳ್ಳಲಾಗಿದೆ.

ಕಳೆದ ವರ್ಷಗಳಲ್ಲಿ ಎಸ್. ಹನುಮಂತಕುಮಾರ್ ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದು, ಈ ಬೆಳವಣಿಗೆಯೊಂದಿಗೆ ಶಿಸ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ. ನೇರಲಗುಂಟೆ ಗ್ರಾಮ ಪಂಚಾಯಿತಿಯ ಹಾಜರಾತಿ ಪರಿಶೀಲನೆಯಿಂದ, ಇವರು 2024ರಿಂದಲೂ ಪೂರ್ವಾನುಮತಿ ಪಡೆಯದೇ ಕಚೇರಿ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವುದು ದೃಢಪಟ್ಟಿದೆ.

ಹಾಗೂ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಮದ್ಯಾಸೇವನೇ ಮಾಡುವ ಲೋಪ ದೋಷಗಳು ಕಂಡು ಬಂದಿರುವುದು ತಿಳಿದು ಬಂದಿದೆ ಈ ಎಲ್ಲಾ ಆಧಾರದಮೇರೆಗೆ ಹನುಮಂತ ಕುಮಾರ ಅವರನ್ನು ಕೂಡಲೇ ಅಮಾನತು ಮಾಡಲು ಆದೇಶ  ಒರಡಿಸಿರುವುದಾಗಿ ತಿಳಿದು ಬಂದಿದೆ.