March 14, 2025

ಚಳ್ಳಕೆರೆ: ನೇರಲಗುಂಟೆ ಗ್ರಾಮ ಪಂಚಾಯ್ತಿ ಪಿಡಿಒ ಅಮಾನತು…!?

Spread the love



ಚಳ್ಳಕೆರೆ :

ತಾಲ್ಲೂಕಿನ ನೇರಲಗುಂಟೆ ಗ್ರಾಮ ಪಂಚಾಯ್ತಿ ಪ್ರಾರಂಭಿಕ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹನುಮಂತ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕರ್ತವ್ಯದ ಲೋಪದೋಷ,ಗೈರು ಹಾಜರು, ಹಾಗೂ  ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ಪ್ರಗತಿಯಿಲ್ಲದ ಕಾರಣ, ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ವರದಿಯಾಗಿದೆ.



ಹನುಮಂತ ಕುಮಾರ್, ಕರ್ತವ್ಯದ ವೇಳೆ ಯಾವಾಗಲೂ ಮದ್ಯದ ಅಮಲಿನಲ್ಲಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದು, ಇದರಿಂದ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳಿಗಿರುವ ಜವಾಬ್ಧಾರಿಯುತ ಕಾರ್ಯಗಳಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಪರಿಣಾಮ, ಜಿಲ್ಲಾಧಿಕಾರಿಗಳು ತಕ್ಷಣದ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕರಾದ ಸಿಇಒ ಅವರ ಮಾರ್ಗದರ್ಶನದಲ್ಲಿ ಈ ನಿರ್ಧಾರ ಜಾರಿಗೆ ಬಂದಿದ್ದು, ಸಾರ್ವಜನಿಕ ಸೇವೆಯ ಪ್ರಮಾಣವನ್ನು ಉಳಿಸುವದಕ್ಕಾಗಿ ಮುನ್ಸೂಚನೆಯಂತೆ ಇತರ ಅಧಿಕಾರಿಗಳಿoದ  ಈ ರೀತಿಯ ಕಾರ್ಯ ಲೋಪದೋಷದ ವರ್ತನೆಗಳು ಮಾರುಕಲಿಸದಿರಲೆಂದು ಹೆಚ್ಚರಿಕೆ ನೀಡಲಾಗಲಿದೆ .

ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುವ ಪಿಡಿಒಗಳ ಹೊಣೆಗಾರಿಕೆಯನ್ನು ದೃಢೀಕರಿಸಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.