March 14, 2025

ಮಗನ ಸಾವಿನ ಸುದ್ದಿಯನ್ನು ಕೇಳಿ ತಂದೆಯೂ ನಿಧನ..!

Spread the love

ಹಾವೇರಿ:

ಜಿಲ್ಲೆಯ ಬಸವೇಶ್ವರ ನಗರದಲ್ಲಿ ಹೃದಯಾಘಾತದಿಂದ ಮಗನ ಸಾವಿನ ಸುದ್ದಿ ಕೇಳಿದ ತಂದೆ, ಡಾ. ವೀರಭದ್ರಪ್ಪ ಗುಂಡಗಾವಿ (68), ಕೂಡಾ ಪ್ರಾಣ ಕಳೆದುಕೊಂಡ ಘಟನೆ ಇಂದು ನಡೆದಿದೆ. ತಂದೆ-ಮಗ ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿದ್ದು, ತಮ್ಮ ಜೀವನದಲ್ಲಿ ಸಾವಿರಾರು ಜನರಿಗೆ ಚಿಕಿತ್ಸೆ ನೀಡುವ ಮೂಲಕ ಉತ್ತಮ ಸೇವೆ ಸಲ್ಲಿಸಿದ್ದಾರೆ.

ತಮ್ಮ ಮಗ ಡಾ. ವಿನಯ ಗುಂಡಗಾವಿ (38) ಯ ಮರಣದ ಸುದ್ದಿಯು ತಂದೆಗೆ ತೀವ್ರ ಅಘತಾವನ್ನುoಟು ಮಾಡಿದ ಕಾರಣ, ಕೆಲವೇ ಗಂಟೆಗಳಲ್ಲಿ ತಂದೆಯ ಕುಸಿದು ಬಿದ್ದು ಸ್ಥಳದಲ್ಲೇಮೃತ ಪಟ್ಟಿದ್ದಾರೆ . ಈ ಅವಘಡವು ಕುಟುಂಬಕ್ಕೆ ದೊಡ್ಡ ತೀವ್ರ ಆಘಾತವನ್ನು ನೀಡಿದ್ದು, ಕುಟುಂಬ ಸದಸ್ಯರು ಆಕ್ರಂದನದಲ್ಲಿ ಮುಳುಗಿದ್ದಾರೆ.