March 14, 2025

ದಾವಣಗೆರೆ: ಎಸ್ಸಿ ಎಸ್ಟಿ ಅನುದಾನ ದುರ್ಬಳಕೆ ಕ್ರಮಕ್ಕೆ ರೈತ ಸಂಘ ಅಗ್ರಹ,

Spread the love

ದಾವಣಗೆರೆ:

ಎಸ್ಸಿ ಮತ್ತು ಎಸ್ಟಿ ಸಂಘ-ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರನಾಯ್ಕ ಗಂಭೀರ ಅಶಕ್ತಿಯ ವ್ಯಕ್ತಪಡಿಸಿದರು. ಅವರು, ಈ ದುರ್ಬಳಕೆ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.



ಸರ್ಕಾರ ಅನುದಾನ ಬಿಡುಗಡೆ ಮಾಡುವಾಗ ಮಾರ್ಗಸೂಚಿಗಳನ್ನು ಪಾಲಿಸಲು ನಿಯಮವಿಲ್ಲದ ಕಾರಣ, ಇದನ್ನು ಅಧಿಕಾರಿಗಳು ಗಮನಿಸುತ್ತಿಲ್ಲ. ಸಹಾಯಧನದ ದುರ್ಬಳಕೆ ಪ್ರಕರಣಗಳು ಹೆಚ್ಚಾಗಿದ್ದು, ಇವು ಸಮಾಜಕ್ಕೆ ಹಾನಿಕಾರಕವಾಗಿವೆ. ಈ ಕೃತ್ಯಗಳಲ್ಲಿ ಭಾಗಿಯಾದವರಿಗೆ ತೀವ್ರ ಶಿಕ್ಷೆ ನೀಡಬೇಕೆಂದು ಶೇಖರನಾಯ್ಕ ಹೇಳಿದರು.