March 14, 2025

ಹೃದಯಾಘಾತಕ್ಕೂ 1 ವಾರ ಮುನ್ನ  ಕಾಣಿಸಿಕೊಳ್ಳುವ ಲಕ್ಷಣಗಳು….!

Spread the love



ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತಿದೆ. ಹೃದಯಾಘಾತದ ಮುನ್ನ ದೇಹದಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತವೆ.

ಹೃದಯಘಾತಕ್ಕೆ 1 ವಾರ ಮುನ್ನ, ಶರೀರದಲ್ಲಿ ಕೆಲವು ಲಕ್ಷಣಗಳು ಕಾಣಿಸುತ್ತವೆ. ಈ ಅವಸ್ಥೆಯಲ್ಲಿನ ಪ್ರಮುಖ ಲಕ್ಷಣವೆಂದರೆ ಎದೆಯಲ್ಲಿ ಸ್ವಲ್ಪ ನೋವು, ಚರ್ಮವು ತೆಳುವಾಗುವುದು, ಮತ್ತು ಬೂದು ಬಣ್ಣಕ್ಕೆ ತಿರುಗುವುದು.



ವಿನಾಕಾರಣ ಪದೇ ಪದೇ ಬೆವರುವುದು , ಆತಂಕ, ಮತ್ತು ತಲೆಸುತ್ತು ಈ ಎಲ್ಲಾ ಲಕ್ಷಣಗಳು ಹೆಚ್ಚಾಗಿ ಕಾಣಿಸಬಹುದು. ಕೈಗಳು ಮತ್ತು ಎಡಗೈ ಬುಜದಲ್ಲಿ ವಿಪರೀತ ನೋವು.

ಉಸಿರಾಟದಲ್ಲಿ ಹೇರುಪೇರು ಸಾಮಾನ್ಯವಾಗಿದ್ದು, ಈ ಎಲ್ಲ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಿಸಿಸದೆ ತಕ್ಷಣವೇ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಹೃದಯಾಘಾತದ ಮುನ್ನ ಈ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುವುದು  ತಿಳಿದು ಬಂದಿದೆ.