March 14, 2025

ಪೊಲೀಸ್ ಪೇದೆಯೊಬ್ಬನಿಂದ ಲಕ್ಷಾಂತರ ರೂಪಾಯಿ ವಂಚನೆ..!?

Spread the love

ಬೆಂಗಳೂರು, :

ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಪೊಲೀಸ್ ಪೇದೆಯೊಬ್ಬನಿಂದ ಲಕ್ಷಾಂತರ ರೂಪಾಯಿ ವಂಚನೆ ನಡೆದಿದೆ. CAR ಹೆಡ್ ಕಾನ್ಸ್ಟೇಬಲ್ ಪ್ರಶಾಂತ್ ಕುಮಾರ್ ವಿರುದ್ಧದ ಈ ಆರೋಪ, ಭಾಗ್ಯಮ್ಮ ಎಂಬ ಮಹಿಳೆಯ ದೂರು ನೀಡಿದ್ದಾರೆ.

ಭಾಗ್ಯಮ್ಮ, 2011ರಲ್ಲಿ ಪ್ರಶಾಂತ್ ಕುಮಾರ್ ಅವರನ್ನು ಭೇಟಿಯಾಗಿ, ತನ್ನ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುವಂತೆ ಕೇಳಿದ್ದಾರೆ. ಅವರು, “ನಾನು ಕೆಲಸ ಕೊಡಿಸುತ್ತೇನೆ” ಎಂದು ಭರವಸೆ ನೀಡಿದ್ದು, 25 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ.

ನಂತರ, ಮಂಜುನಾಥ್ ಪ್ರಸಾದ್ ಎಂಬುವರನ್ನು ಪರಿಚಯಿಸುತ್ತ, ಒಟ್ಟು 47 ಲಕ್ಷ ರೂ. ಮತ್ತು 857 ಗ್ರಾಂ ಚಿನ್ನಾಭರಣ ಪಡೆದಿದ್ದಾರೆ. ಆದರೆ, ಇನ್ನೂ ಯಾವುದೇ ನೌಕರಿ ಕೊಡಸಿಲ್ಲ.

ಈ ಹಿನ್ನೆಲೆಯಲ್ಲಿ ಭಾಗ್ಯಮ್ಮ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಶಾಂತ್ ಕುಮಾರ್, ಅವರ ಪತ್ನಿ ದೀಪಾ ಮತ್ತು ಮಂಜುನಾಥ್ ಪ್ರಸಾದ್ ವಿರುದ್ಧ 0342/24 ಅಡಿಯಲ್ಲಿ ಎಫ್ಐಆರ್  ದಾಖಲಾಗಿದೆ. ಪ್ರಕರಣ ಬೆಳಕಿಗೆ ಬರುವಂತೆ, ಪ್ರಶಾಂತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಹಾಗೂ, ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.