
ಶಿವಮೊಗ್ಗ :
ತಾಲೂಕಿನ ಆಯನೂರು ವಿಜಯ ದಶಮಿಯಂದು ಪೂಜೆ ಸಲ್ಲಿಸಿ ಊರಿನ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳುವಾಗಿದೆ. ಹಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ನರಸಿಂಹಸ್ವಾಮಿ ದೇವಸ್ಥಾನದ ಎದುರು ಚನ್ನಹಳ್ಳಿ ರೈತ ಪಾಲಾಕ್ಷಪ್ಪ ಟ್ರ್ಯಾಕ್ಟರ್‌ಗೆ ಪೂಜೆ ಸಲ್ಲಿಸಿ ರಾತ್ರಿ ಅಲ್ಲಿಯೇ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 8ಕ್ಕೆ ದೇಗುಲದ ಬಳಿ ಹೋದಾಗ ಟ್ರ್ಯಾಕ್ಟರ್ ಕಾಣಿಸಲಿಲ್ಲ. ಟ್ರ್ಯಾಕ್ಟರ್,ಮತ್ತು ಟ್ರಾಲಿ ಸಮೇತ ಕಳುವಾಗಿದೆ ಎಂದು ಕುಂಸಿ ಠಾಣೆಗೆ ದೂರು ನೀಡಿದ್ದಾರೆ.

ಸದ್ಯದ ಮಾಹಿತಿ ಯಂತೆ ಹಾರನಹಳ್ಳಿ ಪೆಟ್ರೋಲ್ ಬಂಕ್ ಎದುರು ಕದ್ದ ಟ್ರಾಕ್ಟರ್ ಶನಿವಾರ ರಾತ್ರಿ 12 ಸಮಯದಲ್ಲಿ ಕಳ್ಳರು ಟ್ರಾಕ್ಟರ್ ಚಲಿಸುಕೋಂಡು ಹೋಗುತ್ತಿರುವ ವೀಡಿಯೋ ಪೆಟ್ರೋಲ್ ಬಂಕ್ ಸಿ.ಸಿ.ಟಿವಿ ಯಲ್ಲಿ ರೆಕಾರ್ಡ್ ಆಗಿದೆ ಠಾಣಾಧಿಕಾರಿಗಳು ಇತರ ಪೊಲೀಸ್ ಠಾಣೆಗಳಿಗೆ ಜಾಗೃತಿಯ ಸೂಚನೆಗಳನ್ನು ನೀಡಿದೆ, ಮತ್ತು ಟ್ರ್ಯಾಕ್ಟರ್‌ನ್ನು ಚಲಾಯಿಸಲು ಬಳಸುವ ಎಲ್ಲಾ ಮಾರ್ಗಗಳಲ್ಲಿ ನಿಗ್ರಹಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ಸ್ಪೆಕ್ಟರ್ ದೀಪಕ್ ಅವರು ಪಡೆದುಕೊಂಡ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಯೋಜಿಸುತ್ತಿದ್ದಾರೆ.

ಇಂತಹ ಹಲವು ಪ್ರಕರಣ ಭೇದಿಸಿದ ಖ್ಯಾತಿ ಸರ್ಕಲ್ ಇನ್ಸ್ಪೆಕ್ಟರ್ ದೀಪಕ್ ಅವರಗೀದೆ ಈ ಹಿಂದೆ ಶಿವಮೊಗ್ಗ ಅತೀ ಸೂಕ್ಷ್ಮ ಕೋಟೆ ಪೋಲಿಸ್ ಠಾಣೆ, ಹಾಗೂ ತುಂಗಾನಗರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆಯ ಕೀರ್ತಿ ಇವರಿಗಿದೆ.

ಆದ್ದರಿಂದ ಈ ಪ್ರಕರಣ ವನ್ನು ತುರ್ತಾಗಿ ಬೆದಿಸಿ ಕಳ್ಳರನ್ನು ಹೆಡೆಮುರಿ ಕಟ್ಟುವ ಕೆಲಸ ಕುಂಸಿ ಠಾಣೆಯ ಪೋಲಿಸ ಅಧಿಕಾರಿಗಳ ಮೇಲಿದೆ ಪ್ರಕಾರಣವನ್ನು ಯಾವರೀತಿ ಬೇದಿ ಸುವರೆಂದು ಕಾದು ನೋಡಬೇಕಿದೆ…. ✍🏻