March 14, 2025

ಅರಣ್ಯ ಒತ್ತುವರಿದಾರರಿಗೆ ಸಿಂಹಸ್ವಪ್ನ ವಾದರ RFO ದುಗ್ಗಪ್ಪ…..!

Spread the love


ಭದ್ರಾವತಿ :


ಹೊಳೆಹೊನ್ನೂರಿನಲ್ಲಿ ಡಿಸಿಎಫ್ ಆಶೀಶ್ ರೆಡ್ಡಿ, ಆರ್‌ಎಫ್‌ಓ ಜಗದೀಶನಿಗೆ ರಜೆ ನೀಡಿದ ಬಳಿಕ, ಆರ್‌ಎಫ್‌ಒ ದುಗ್ಗಪ್ಪನಿಗೆ ಒತ್ತುವರಿ ತೆರವುಗೊಳಿಸಲು ಜವಾಬ್ದಾರಿ ವಹಿಸಲಾಗಿದೆ. ಅರಣ್ಯ ಗಡಿಗೆ ತೇಪೆ ಹಚ್ಚಲು ಕೆಲವು ಜಮೀನು ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಲಾದರೂ, ದುಗ್ಗಪ್ಪ ಮತ್ತು ಕೃಷ್ಣಸಾರಥಿ ಅವರ ತಂಡವು ದೊಡ್ಡ ಪ್ರಮಾಣದಲ್ಲಿ ಕಾರ್ಯಚರಣೆ ನಡೆಸಲು ಪ್ಲಾನ್ ಮಾಡಿಕೊಂಡಿತ್ತು.

ಅದರ ಮೇಲೆ, ಹೊಳೆಹೊನ್ನೂರು ಠಾಣೆಯ ಡಿಆರ್‌ಎಫ್‌ಓ ಮತ್ತು ಕೆಎಸ್‌ಆರ್‌ಪಿ ಪೊಲೀಸರು ಒತ್ತುವರಿ ಕಾರ್ಯಾಚರಣೆಗೆ ಸೇರಿ, 200 ಎಕರೆ ಮಟ್ಟಿಗೆ ತೆರವುಗೊಳಿಸಿದರು. ಈ ಕಾರ್ಯಾಚರಣೆ ಕುರಿತಂತೆ, ಬಹಳಷ್ಟು ವಿರೋಧ ವ್ಯಕ್ತವಾಯಿತು, ಆದರೆ ದುಗ್ಗಪ್ಪ ಮತ್ತು ತಂಡವು 20 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿದರು.

ದುಗ್ಗಪ್ಪರವರು ಅಧಿಕಾರ ವಹಿಸಿಕೊಂಡ ಮೇಲೆ ಒತ್ತುವರಿಯನ್ನು ದೊಡ್ಡ ಮಟ್ಟದಲ್ಲೇ ತೆರವುಗೊಳಿಸಲು ಪ್ಲಾನ್ ಮಾಡಿದ್ದರು ತೆರವು ಕಾರ್ಯಾಚರಣೆಗೆ ವ್ಯಾಪಕ ವಿರೋಧವೂ  ವ್ಯಕ್ತವಾಗಿತ್ತು.ಒತ್ತುವರಿದಾರರಿಗೂ ಮತ್ತು ಕೆಲ ಲಂಚಕೋರ ಅಧಿಕಾರಿಗಳಿಗೂ ಸಿಂಹ ಸ್ವಪ್ನವಾಗಿದ್ದಾ RFO ದುಗ್ಗಪ್ಪ ಯಾವ ಅಡೇ ತಡೆ ಗಳಿಗೂ ಬಗ್ಗದೆ ಕಾರ್ಯಾಚರಣೆ ಮುಂದುವರೆಸಲು ಆರಂಭ ಮಾಡಿದ್ದರು.


ಅದಕ್ಕಾಗಿ ಹೊಳೆಹೊನ್ನೂರು ಠಾಣೆ  ಪೊಲೀಸ್,ಮತ್ತು ಕೆಎಸ್‌ಆರ್‌ಪಿ ಪೊಲೀಸರ ನೆರವು ಪಡೆದು, ಒತ್ತುವರಿ ಕಾರ್ಯಾಚರಣೆಗೆ ಮೊಹರ್ಥ ಫಿಕ್ಸ್ ಮಾಡಿದ್ದರು.

ಅರಣ್ಯ ಇಲಾಖೆಯ ಅಧಿಕಾರಿಗಳೇ ಲಕ್ಷ ಲಕ್ಷ ಎಣಿಸಿಕೊಂಡು ತೋಟ ಕಟ್ಟಲು ಬಿಟ್ಟು, ಈಗ ಏಕಾಏಕಿ ತೆರವುಗೊಳಿಸುತ್ತಾರೆಂದು ನಿರೀಕ್ಷಿಸಿರದ ಒತ್ತುವರಿದಾರರು ಕಕ್ಕಾಬಿಕ್ಕಿಯಾಗಿದ್ದರು.

ಒಟ್ಟಾರೆ, ಒತ್ತುವರಿಯೇ ಆಗಿಲ್ಲ ಎಂದು ಸುಳ್ಳು ಹೇಳಿ ಬಿಡುತ್ತಿದ್ದ ಆಶಿಶ್ ರೆಡ್ಡಿ ಅಂಡ್ ಟೀಮ್‌ ಗೆ ತಾನೇ ಕಳಿಸಿದ ಅಧಿಕಾರಿಗಳು ಮಾಡುತ್ತಿರುವ ಕಾರ್ಯಾಚರಣೆಯೇ ಮುಳುವಾಗುವ ಎಲ್ಲಾ ಸಾಧ್ಯತೆಗಳೂ ಎದುರಾಗುತ್ತಿದೆ…