
ಸ್ಥಳ: ಸಾಗರ, ಬರದ ವಳ್ಳಿ
ಬರದ ವಳ್ಳಿ ಗ್ರಾಮದ ರೈತರು ತಮ್ಮ ಗ್ರಾಮದ ಸರ್ವೆ ನಂ. 275 ರಲ್ಲಿ 93 ಎಕರೆ ಮತ್ತು 285 ರಲ್ಲಿ 45 ಎಕರೆ ಅರಣ್ಯವನ್ನು ಖಾಸಗಿ ವ್ಯಕ್ತಿಗಳಿಂದ ಉಳಿಸಲು ಪಾದಯಾತ್ರೆ ನಡೆಸಿದರು. ಗ್ರಾಮಸ್ಥರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಒಂದು ಜಮಾವಣೆ ಆಯೋಜಿಸಿದರು ಮತ್ತು ಮನವಿ ಸಲ್ಲಿಸಿದರು.
ಸಭೆಯಲ್ಲಿ ಮಾತನಾಡಿದ ತಾ.ಪಂ. ಮಾಜಿ ಉಪಾಧ್ಯಕ್ಷ ಅಶೋಕ್, “ಸರ್ಕಾರಿ ಜಾಗವನ್ನು ಉಳಿಸಲು ಅಧಿಕಾರಿಗಳು ಕ್ರಮವಹಿಸುವುದಿಲ್ಲ. ಇದರಿಂದಾಗಿ ಗ್ರಾಮಸ್ಥರು ಪಾದಯಾತ್ರೆಯ ಮೂಲಕ ಅಧಿಕಾರಿಗಳಿಗೆ ಜಾಗೃತಿ ಮೂಡಿಸುತ್ತಿದ್ದೇವೆ” ಎಂದು ಎಚ್ಚರಿಸಿದರು.
ಸೊರಬ ವಿಧಾನಸಭಾ ಕ್ಷೇತ್ರದಲ್ಲಿರುವ ಈ ಅರಣ್ಯಜಾಗವನ್ನು ದ್ಯಾವಪ್ಪ ಮತ್ತು ಸದಾಶಿವ ಇತರರು ಖಾತೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಘನ ನ್ಯಾಯಾಲಯ ದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ, ಆದರೆ ತಹಶಿಲ್ದಾರ್ ಸರಿಯಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿ ಸರ್ಕಾರಿ ಜಾಗವನ್ನು ಅಧಿಕಾರಿಗಳು ಉಳಿಸಿಕೊಡುವಂತೆ ಆಗ್ರಹಿಸಿದ್ದಾರೆ.