March 14, 2025

ಗ್ರಾಮ ಪಂಚಾಯತಿ, ಲೋಕಪಯೋಗಿ ಇಲಾಖೆ, ಅರಣ್ಯ ಇಲಾಖೆ ಹೀಗೆ ಕಾಲಹರಣ.?
ಮಳೆಗಾಲದಲ್ಲಿ ಒಣಗಿದ ಕೊಂಬೆ ಕಡಿಯದೆ.. ತೆಗೆದರ ಓಂದು ಅಮಾಯಕ ಬಡ ರೈತನ ಜೀವ.!?

Spread the love

ತುಮಕೂರು:   ಶಿರಾ ತಾಲೂಕ, ಹೊಸಪಾಳ್ಯ ದಿಂದ ಹಾಗಲವಾಡಿ ಹೋಗುವ ರಸ್ತೆ ಮಾರ್ಗದಲ್ಲಿ ನೆನ್ನೆ ಚಲಿಸುತ್ತಿದ್ದ ಬೈಕ್  ಸವಾರನ ಮೇಲೆ ಮರದ ಕೊಂಬೆ ಬಿದ್ದು ರೇವಣ್ಣ (56) ಸ್ಥಳ ದಲ್ಲೆ ಸಾವನ್ನಪ್ಪುತ್ತಾರೆ



  ಬುಕ್ಕಪಟ್ಟಣದ ಸಮೀಪ ರಸ್ತೆ ಮಾರ್ಗದಲ್ಲಿ ನೆನ್ನೆ ಒಣಗಿದ ಮರದ ಕೊಂಬೆ ಯೊಂದು ಬಿದ್ದು ರೈತ ರೇವಣ್ಣ 56ವರ್ಷ ಸ್ಥಳದಲ್ಲೇ ಮೃತಾಪಟ್ಟಿದ್ದಾರೆ.



ಎನೇ ಹೇಳಿ ನಮ್ಮ ಅಧಿಕಾರಿಗಳು ಅವರ ಅವರ ಕೆಲಸಗಳನ್ನು  ಸರಿಯಾಗಿ ಮಾಡದೆ ಇಡೀ ವ್ಯವಸ್ಥೆ ಯನ್ನು  ಅದೆಷ್ಟರಮಟ್ಟಿಗೆ ಕುಲಗೆಡಿಸಿ ಹಾಕಿದ್ದಾರೆ ಎಂದರೆ ಈ  ರೈತ ರೇವಣ್ಣನಾ ಸಾವಿಗೆ ಯಾವ ಇಲಾಖೆ ಹೋಣೆ ಹೊತ್ತುಕೋಳ್ಳುತ್ತದೆ ನೀವೆ ಹೇಳಿ.!

ಮೊನ್ನೆಯಷ್ಟೇ ಇದೇ ಹೊಸಕೆರೆ ಪಂಚಾಯತಿ ವ್ಯಾಪ್ತಿಯಲ್ಲಿ  ಫೋಟೋ ಗ್ರಾಪರ್ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವ ಸಮಯದಲ್ಲಿ ಇದೇ ತರ ರಸ್ತೆ ಮಾರ್ಗದಲ್ಲಿ ಬರುವಾಗ ಬೈಕ್ ಮೇಲೆ ಮರಬಿದ್ದು ತನ್ನ ಕಾಲುಗಳನ್ನ ಕಳೆದುಕೊಂಡಿರುವ ಘಟನೆ ಇನ್ನು ಜನತೆಯು ಮರೆಯುವಷ್ಟರಲ್ಲೇ ಮತ್ತೆ ಈ ಘಟನೆ  ಮರುಕಳಿಸಿದೆ.



ಇನ್ನಾದರೂ ಸಂಬಂಧ ಪಟ್ಟ ಗ್ರಾಮ ಪಂಚಾಯತಿ, ಲೋಕಪಯೋಗಿ ಇಲಾಖೆ, ಅರಣ್ಯ ಇಲಾಖೆ ಹೀಗೆ
ಒಬ್ಬರ ಮೇಲೆ ಗೂಬೆ ಕೂರಸಿವ ಬದಲಾಗಿ ಸತ್ತ ವ್ಯಕ್ತಿಗೆ
ಪರಿಹಾರ ಕೋಡಸುವಲ್ಲಿ ಪೋಲಿಸ್ ಅಧಿಕಾರಿಗಳು ಗಮನ ಅರಿಸಬೇಕು
ಇದಕ್ಕೆ ತಾಜಾ ಉದಾಹರಣೆಗೆ ಇತ್ತೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ತುಂಗಾಭದ್ರನದಿಯಲ್ಲಿ ಮರಳುಎತ್ತುವ ಗಲಾಟೆಯಲ್ಲಿ ಸತ್ತಾ ವ್ಯಕ್ತಿ ಗೆ ಲಕ್ಷ ಗಟ್ಟಲೆ ಪರಿಹಾರ ನೀಡಿದೆ ಜಿಲ್ಲಾಡಳಿತ,ಅಗಾದರೆ ಅಮಯಕ ಬಡ ರೈತನಿಗೆ ಪರಿಹಾರದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಕ್ಷಣವೇ ನೀಡಲಿ ಎಂಬುದು ರೈತರ ಆಗ್ರಹವಾಗಿದೆ.

ಹೋದ ಜೀವ ಮತ್ತೆ ಬಾರದು ಇನ್ನು ಮುಂದೆ ಯಾದರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೇತ್ತುಕೊಂಡು ಈ ತರದ ಘಟನೆಗಳು ಮತ್ತೆ ಮರುಕಲಿಸದೆ ನೋಡಿ ಕೊಳ್ಳುವಲ್ಲಿ ಗಮನ ಹರಿಸಬೇಕು ಸಾರ್ವಾಜನಿಕರು  ಆಗ್ರಹಿಸಿದ್ದಾರೆ.


ಘಟನೆಯು ತುಮೂಕುರು ಜಿಲ್ಲೆ ಸೀರಾ ಟೌನ ಪೊಲೀಸ ಠಾಣಾಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ  ಪ್ರಕರಣ ದಾಖಲಿಸಿದ್ದಾರೆ

” ಮರದಲ್ಲಿನ ಸತ್ತಾ ಕೊಂಬೆ ಒಬ್ಬ ವ್ಯಕ್ತಿಯ ಜೀವವನ್ನೇ ಮುಕ್ತಯ ಗೊಳಿಸಿದೆ ” ಮನುಷ್ಯನ ಜೀವಕ್ಕೆ ಬೆಲೆ ಇಲ್ಲಾ ಸ್ವಾಮಿ……!