March 14, 2025

37 ಗೋವುಗಳ ರಕ್ಷಣೆ :ಹಿಂದೂ ಕಾ.ಕರ್ತರಿಂದ ಸರ್ಕಾರದ ವಿರುದ್ಧ ಘೋಷಣೆ..!?

Spread the love

ಶಿಕಾರಿಪುರ :

ತಾಲೂಕಿನ ಶಿರಾಳಕೊಪ್ಪದಿಂದ ಮಂಗಳೂರು ಬಿ.ಸಿ. ರಸ್ತೆಗೆ ಹೋಗುತ್ತಿದ್ದ 407 ಐಷರ್ ವಾಹನವನ್ನು ಬಜರಂಗದಳ ಯುವಕರು ತಡೆದು ಜಯನಗರ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಉಷ ನರ್ಸಿಂಗ್ ಹೋಮ್ ವೃತ್ತದ ಬಳಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಾಹನವನ್ನು ತಡೆದ ನಂತರ, 112 ಸಂಖ್ಯೆಗೆ ಕರೆ ಮಾಡಿ ಪೊಲೀಸ ಅಧಿಕಾರಿಗಳ  ಸಹಾಯದಿಂದ

ಸಾಂದರ್ಭಿಕ ಚಿತ್ರ :

407 ಮಾದರಿಯ ವಾಹನವನ್ನು ತಡೆದು ವಾಹನದಲ್ಲಿ ಟಾರ್ಪಲ್ ತೆಗೆದು ನೋಡುದಾಗ ವಾಹನದಲ್ಲಿ ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದನ್ನು ಕಂಡ,112 ಪೊಲೀಸರು ತಕ್ಷಣವೇ ಅಧಿಕಾರಿಗಳ ಗಮನಕ್ಕೆತಂದು ಆ ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ವಾಹನದ ಟಾರ್ಪಲ್ ತೆಗೆದು ನೋಡಿದಾಗ  ಹಸುಗಳು, ಕರುಗಳು ಮತ್ತು ಎತ್ತುಗಳು ಒಟ್ಟು 37 ಗೋವುಗಳನ್ನ ಹಿಂಸಾತ್ಮಕಾವಾಗಿ ಕಟ್ಟಿಹಾಕಿ ಸಾಗಿಸುತ್ತಿರುವ ದೃಶ್ಯ ಕಂಡುಬಂದಿತು.

ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ, ವಾಹನದ ಒಳಗಡೆಯಲ್ಲಿದ್ದ ವ್ಯಕ್ತಿಯೊಬ್ಬ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ, ಆದರೆ ಪೊಲೀಸರು ಅವನನ್ನು ವಶಕ್ಕೆ ಪಡೆದಿದ್ದಾರೆ. ಈ ವ್ಯಕ್ತಿಯನ್ನು ಹಸುಗಳನ್ನು ಸಾಗಿಸುವ ಮದ್ಯಾವರ್ತಿಯಾಗಿ ಗುರುತಿಸಲಾಗಿದೆ.

ಈ ಪ್ರಕಾರಣವೂ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಆ ವ್ಯಕ್ತಿಗಳ ವಿರುದ್ಧ ಪ್ರಕರಣ ಧಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ ಮತ್ತು ಕ್ಯಾಂಟರ್‌ನಲ್ಲಿ ಸಾಗಿಸಲು ಯತ್ನಿಸುತ್ತಿದ್ದ 37 ಹಸುಗಳನ್ನು ವಶಕ್ಕೆ ಪಡೆದು ಸುರಕ್ಷಿತವಾಗಿ ಮಹಾವೀರ ಗೋಶಾಲೆಗೆ  ಬಿಡಲಾಗಿದೆ.