March 14, 2025

ಮರಳಿಗಾಗಿ ಎರಡು ಗ್ರಾಮಗಳ ನಡುವೆ ಬಡಿದಾಟ ಓರ್ವ ಸಾವು… “?

Spread the love

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಮರಿಗೊಂಡನಹಳ್ಳಿ ಮತ್ತು ಕಡಕಟ್ಟೆ ಗ್ರಾಮಗಳಲ್ಲಿ ಮರಳಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯು ಗಂಭೀರವಾಗಿ ಪರ್ಯಾಯವಾಯಿತು. ಈ ಘಟನೆಯಲ್ಲಿ 33 ವರ್ಷದ ಶಿವರಾಜ್ ಸಾವಿಗೆ ಗುರಿಯಾದರೆ, ಇತರೊಬ್ಬ ವ್ಯಕ್ತಿ ಭರತ್ ತೀವ್ರ ಗಾಯಗಳೊಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸೇರಿಸಲಾಯಿತು.

ಆ ಘಟನೆಗೆ ಇನ್ನೆಲೆ , ಎರಡು ಗ್ರಾಮಗಳ ನಡುವಿನ ಘರ್ಷಣೆ, ಮರಳು ಕಾರಣವಾಹಿತೆ .ಮರಳುವ ಟ್ ತುಂಬುವ ವಿಚಾರದಲ್ಲಿ ಇಬ್ಬರ ನಡುವಿನ ಜಗಳವು ವಿಕೋಪಕ್ಕೆ ತಿರುಗಿ ,  ಚಾಕು ಇರಿತದಿಂದ ಒಬ್ಬರ ಸಾವಿನಲ್ಲಿ ಕೊನೆಗೊಂಡಿತು.

ಘಟನೆಯ ನಂತರ, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಸ್ಥಳಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.