March 14, 2025

ಕೋನಗವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ  ವಾಲಕೇಶಪುರದ ರುದ್ರಭೂಮಿಯ ಆಕ್ರಮಣ: ಬಡ ಮಹಿಳೆಯ ಶವ ಹೂಳಲು ಬಿಡದೆ ದರ್ಪದಿಂದ ಮೆರೆದ ಬೂಗಳ್ಳರು ಜಿಲ್ಲಾಡಳಿತದ  ಕ್ರಮ ಏನು….???

Spread the love

ಶಿವಮೊಗ್ಗ:

ಸಾಂದರ್ಭಿಕ ಚಿತ್ರ.



ಇದು ಶಿವಮೊಗ್ಗ ಜಿಲ್ಲೆಯ  ಕೋನಗವಳ್ಳಿ ಗ್ರಾಮ ಪಂಚಾಯತಿಯ ವಾಲ್ಕೆಶಪುರ ಗ್ರಾಮದ ಅಡ್ಡಕಸುಬಿ
ದಂಧೆಗಿಳಿದಿರುವ ಹಳ್ಳಿಯ ಪೂಡಿ ರಾಜಕಾರಣದ ನಶೆ ಏರಿಸಿಕೊಂಡು ಅಕ್ಷರ ಜ್ಞಾನ ಇಲ್ಲದಿದ್ದರೂ ರಾಜಕಾರಣ ಮಾಡಲು ಹೊರಟ ಅಧಮ,ಮು ..!?  ವರ್ಗದವರ
ಅಯೋಗ್ಯ ಮುಖವಾಡ ದರ್ಶನ! ಸದ್ಯದರಲ್ಲೆ ಬಟ್ಟ ಬಯಲಗುತ್ತೆ ಇವರ ಚರಿತ್ರೆ. ಕಾದು ನೋಡಿ.

ಅಧಿಕಾರಿಗಳಿಗೆ  ಇದು ಸರಿಯಾದ ಧಾಖಲೆಯಲ್ಲವಂತೆ..!..??



ಈ ದಗಾಕೋರ ಬೂಗಳ್ಳರು ಅದ್ಯಾವಪರಿ ತಿನ್ನಲು
ನಿಂತಿದ್ದಾರೆಂದರೆ, ಕನಿಷ್ಟ ಮನುಷ್ಯತ್ವವನ್ನೂ ಬಿಟ್ಟು
ಈ ಧೂರ್ತರು ಹಳ್ಳಿಯ ರುದ್ರಭೂಮಿಯ ಜಾಗವನ್ನು ನುಂಗಲು ನಿಂತಿದ್ದಾರೆ.

ಇದು ಧಾಖಲೆಯಲ್ಲವಂತೆ ನಮ್ಮ ಅಧಿಕಾರಿಗಳಿಗೆ ….!….??



ಶಿವಮೊಗ್ಗ ತಾಲ್ಲೂಕಿನ ಕೋನಗವಳ್ಳಿ ಗ್ರಾ. ಪ. ವ್ಯಾಪ್ತಿಯ ವಾಲಕೇಶಪುರ ಗ್ರಾಮದಲ್ಲಿ ಸರ್ಕಾರದಿಂದ ರುದ್ರಭೂಮಿಗಾಗಿ 2 ಎಕರೆ ಜಮೀನು ಮೀಸಲಾಗಿದೆ. ಆದರೆ, ಅದೆ ಹಳ್ಳಿಯ ಕೆಲವರು ಈ ಪ್ರದೇಶವನ್ನು ಕೆಲವರು ಆಕ್ರಮಿಸಿಕೊಂಡು, ಸೈಟ್‌ಗಳಾಗಿ ಪರಿವರ್ತಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ವಿಪರ್ಯಸವೇ,   13.09.24 ರಂದು ರಾತ್ರಿ ವಲಕೇಶಪುರ ಗ್ರಾಮದಲ್ಲಿ ಸ್ವಂತ ಜಮೀನು ಇಲ್ಲದೆ  ಕೂಲಿ ಮಾಡಿ ಜಿವನ ಮಾಡುತ್ತೀದ್ದ  ವೃದ್ದೆ  ಮೃತಾಪಟ್ಟಿದ್ದು ಶವವನ್ನು 24 ಗಂಟೆಗಳ ಕಾಲ ಭೂ ಗಳ್ಳರು ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ನೀಡದೆ  ಕುಟುಂಬಸ್ಥರು ಶವವನ್ನು ಎಲ್ಲಿ ಹೂಳುವುದು ಎಂದು ಯೊಚಿಸುತ್ತಾ  ಮನೆಯಲ್ಲಿಯೇ ಇಟ್ಟುಕೊಂಡು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಇದು ಸಹ ಧಾಖಲೆಯಲ್ಲವಂತೆ ನಮ್ಮ ಅಧಿಕಾರಿಗಳಿಗೆ…!..?


ಈ ಸಂದರ್ಭದಲ್ಲಿ,  ಈ ವಿಷಯ ಗ್ರಾಮ ಪಂಚಾಯಿತಿಯ ಸಂಬಂಧಿತ PDO, ಹಾಗೂ ಹಾಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಗಮನಕ್ಕೆ ತರಲಾಗುತ್ತದೆ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪಿಡಿಒ ಅವರು ಭೂಮಿ ಅಕ್ರಮಿಸಿಕೊಂಡಿರುವರ ಜೊತೆ ಚರ್ಚಸಿ   ಏನು ಕ್ರಮಗೊಳ್ಳದೆ ವಾಪಸ್ ಆಗಿದ್ದಾರೆ
ಅಷ್ಟರಲ್ಲಿ ಊರಿನ ಪ್ರಮುಖರು ಕುಂಸಿ ಠಾಣೆಗೆ ಸಂಬಂಧಪಟ್ಟ ದಾಖಲೆಯೊಂದಿಗೆ ದೂರನ್ನು ನೀಡುತ್ತಾರೆ ಅಷ್ಟರಲ್ಲೇ ಸ್ಟೆಷನಗೆ ಯಾವ ದೋಡ್ಡವರ ಕರೆ ಬಂತೋ ದೆವರ ಬಲ್ಲ.. ಅಷ್ಟು ಹೋತ್ತು ಸ್ಥಳಕ್ಕೆ ಬರುತ್ತೆವೆ ಅನ್ನುತಿದ್ದವರು  ಈಗ ಸ್ಥಳಕ್ಕೆ ಬರಲು ಆಗುವುದಿಲ್ಲ
ಹಳ್ಳಿಯಲ್ಲಿ ಕಾಲಿ ಜಾಗದಲ್ಲಿ ಹೂಳಿ ಮುಂದೆ ನೋಡೋಣ ಎಂಬ ಉತ್ತರವನ್ನು ನೀಡಿ ಹಳ್ಳಿಯ ಗ್ರಾಮಸ್ಥರನ್ನು ಕಳಿಸಿದ್ದಾರೆ.

RTC ಇದು ಧಾಖಲೆಯಲ್ಲವೇ ಸ್ವಾಮಿ….!…?


ಪುನ್ಹ ಹಳ್ಳಿಯ ಗ್ರಾಮಸ್ಥರು EO, ಮತ್ತು CEO ಅವರ ಗಮನಕ್ಕೆ ತರುವ ಮೂಲಕ, ರುದ್ರಭೂಮಿಗೆ ಸಂಬಂಧಪಟ್ಟ ವಿಷಯವನ್ನು ತಿಳಿಸುತ್ತಾರೆ ಯಾರು ಗಮನಹರಿಸದ ಕಾರಣ ಬಡ ಕೂಲಿ ಕಾರ್ಮಿಕ ಮಹಿಳೆಯ ಶವವನ್ನು  ಕೆರೆಯ ಪಕ್ಕದಲ್ಲಿ  ಮುಚ್ಚುವ ಪರಿಸ್ಥಿತಿ ಉಂಟುಮಾಡಿದ್ದಾರೆ ಎಂದು ವರದಿಯಾಗಿದೆ.

ತಹಶೀಲ್ದಾರ್ ನೀಡಿರುವ ಧಾಖಲೆಯೂ ಮಾನ್ಯಾವಲ್ಲವಂತೆ…!..?



ಪ್ರಸ್ತುತ ಸ್ಥಿತಿಯ ಬಗ್ಗೆ, ಸಂಬಂಧಿತ ಅಧಿಕಾರಿಗಳೇ  ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ ಎಂದರೆ ಹೇಗೆ  ರುದ್ರಭೂಮಿಯ ಅಕ್ರಮದ ಬಗ್ಗೆ ಸೂಕ್ತವಾಗಿ ತನಿಖೆ ನಡೆಸಿ, ಧಾಖಲೆ ಮತ್ತು ಸ್ಥಳ ಪರಿಶೀಲನೆ ಮಾಡುವುದರ ಮೂಲಕ ಆಕ್ರಮಿತ ಸ್ಥಳವನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ಗಮನಹರಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನದಲ್ಲಿ ನಮ್ಮ ಹಳ್ಳಿಯಲ್ಲಿ ಯಾರಾದರೂ ಧೈವ ದೀನರಾದರೆ ಶವವನ್ನು ಜಿಲ್ಲಾಧಿಕಾರಿ ಕಚೇರಿ ಮುಂದಿಟ್ಟು ಪ್ರತಿಪಡಿಸುವುದಾಗಿ ಗ್ರಾಮಸ್ಥರು  ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಏನು ಕ್ರಮ ಜರುಗಿಸುವುದೆಂದು ಕಾದು ನೋಡಬೇಕಾಗಿದೆ.