March 14, 2025

Crime News: ಸಂಬಳ ಸಾಕಾಗಲ್ಲ ಅಂತ ಹೆಂಡ್ತಿ ಬೈಗುಳ; ಒಂದೇ ಸರಿ ಲಕ್ಷಾಧಿಪತಿಯಾಗಲು ಗಂಡನ ಖತರ್ನಾಕ್ ಕೆಲಸ!

Spread the love

ಬೆಂಗಳೂರಲ್ಲಿ ಅಷ್ಟು ವರ್ಷದಿಂದ ಬರೀ 18 ಸಾವಿರ ರೂಪಾಯಿ ಸಂಬಳ ತಗೊಂಡು ಏನ್ ಜೀವನ ಮಾಡೋಕೆ ಆಗುತ್ತೆ ಅಂತೆಲ್ಲಾ ಅವಾಚ್ಯ ಶಬ್ದಗಳಿಂದ ಬೈತಿದ್ಳಂತೆ. ಇದರಿಂದ ರೋಸಿಹೋಗಿದ್ದ ಸುರೇಂದ್ರ ಒಂದೇ ಸರಿ ಲಕ್ಷಾಧಿಪತಿ ಆಗಬೇಕು ಅಂತ ಹೀಗೆ ಉಂಡ ಮನೆಗೆ ಕನ್ನ ಹಾಕಿದ್ದಾನೆ.

ಬೆಂಗಳೂರು: ಆತ ಕಳೆದ ಮೂರು ವರ್ಷಗಳಿಂದ ನಂಬಿಕಸ್ತನಂತೆ ಮನೆ ಕೆಲಸ (Work) ಮಾಡಿಕೊಂಡಿದ್ದ. ಆ ಮನೆ ಯಜಮಾನರು (Owner) ತಾವು ಎಲ್ಲೇ ಹೋಗಲಿ ಮನೆ ಜವಾಬ್ದಾರಿಯನ್ನ (Responsibility) ಕೆಲಸದವನಿಗೆ ಒಪ್ಪಿಸಿ ಹೋಗುತ್ತಿದ್ದರು. ಹೀಗಿರುವಾಗ ಮನೆ ಕೆಲಸದವನ ಹೆಂಡತಿಯ (Wife) ಬೈಗುಳ ಕೊನೆಗೆ ಅವನನ್ನೇ ಕಳ್ಳನಂತೆ ಮಾಡಿದೆ.

ರಾಜಧಾನಿ ಬೆಂಗಳೂರಲ್ಲಿ ಯಾರನ್ನ ನಂಬೋದು ಅನ್ನೋದೇ ಗೊತ್ತಾಗಲ್ಲ. ನಂಬಿಕಸ್ಥರಂತೇ ಇದ್ದು ಬೆನ್ನಹಿಂದೆ ಚೂರಿ ಹಾಕಿಬಿಟ್ಟಿರ್ತಾರೆ. ಒಳ್ಳೆಯವನು ಅಂತ ಮನೆ ಕೆಲಸಕ್ಕೆ ಸೇರಿಸಿಕೊಂಡ್ರೆ ಮನೆಯನ್ನೇ ದೋಚಿ ನೆಲಸಮ ಮಾಡಿ ಹೋಗಿಬಿಟ್ಟಿರ್ತಾರೆ. ಮಹದೇವಪುರದ ದೊಡ್ಡನೆಕ್ಕುಂದಿ ಬಳಿಯೂ ಇದೇ ಆಗಿದೆ.. ಮುಂಬೈ ಮೂಲದ ಉದ್ಯಮಿಯೊಬ್ಬರು ತಮ್ಮ ಅಪಾರ್ಟ್‌ಮೆಂಟ್‌‌ನಲ್ಲಿ ಮನೆ ಕೆಲಸಕ್ಕೆ ಅಂತ ವ್ಯಕ್ತಿಯೊಬ್ಬನನ್ನ ಕೆಲಸಕ್ಕೆ ಇಟ್ಟುಕೊಂಡಿದರೆ ಅವನು ಇರೋದೆಲ್ಲವನ್ನೂ ದೋಚ್ಕೊಂಡು ಹೋಗಿಬಿಟ್ಟಿದ್ದಾನೆ.

ದೊಡ್ಡನೆಕ್ಕುಂದಿಯ ಉದ್ಯಮಿಯೊಬ್ಬರು ಅಸ್ಸಾಂ ಮೂಲದ ಸುರೇಂದ್ರ ಅನ್ನೋನನ್ನ 3 ವರ್ಷದಿಂದ ತಮ್ಮ ಮನೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ತಿಂಗಳಿಗೆ 18 ಸಾವಿರ ಸಂಬಳವನ್ನೂ ಕೊಡುತ್ತಿದ್ದರು. ಉದ್ಯಮಿ ಕುಟುಂಬ ಇತ್ತೀಚೆಗೆ ಮುಂಬೈಗೆ ಹೋಗಿತ್ತು. ಈ ವೇಳೆ ಸುರೇಂದ್ರ ಉದ್ಯಮಿ ಮನೆಯಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ 502 ಗ್ರಾಂ ಚಿನ್ನಾಭರಣ ಮತ್ತು 99.5 ಗ್ರಾಂ ಡೈಮಂಡ್ ಹಾಗೂ ಅಮೇರಿಕನ್ ಡಾಲರ್ ಗಳನ್ನ ಕದ್ದು ವಿಜಯವಾಡಕ್ಕೆ ಎಸ್ಕೇಪ್ ಆಗಿದ್ದಆರೋಪಿ ಸುರೇಂದ್ರ ಹೀಗೆ ಉಂಡ ಮನೆಗೆ ಕನ್ನ ಹಾಕೋದಕ್ಕೆ ಅವನ ಹೆಂಡತಿ ಕಾರಣ ಅಂತೆ. ಏಕೆಂದರೆ ಸುರೇಂದ್ರನ ಪತ್ನಿ ಯಾವಾಗಳೂ ಗಂಡನ್ನ ಬೈತಿದ್ದಳಂತೆ. ಬೆಂಗಳೂರಲ್ಲಿ ಅಷ್ಟು ವರ್ಷದಿಂದ ಬರೀ 18 ಸಾವಿರ ರೂಪಾಯಿ ಸಂಬಳ ತಗೊಂಡು ಏನ್ ಜೀವನ ಮಾಡೋಕೆ ಆಗುತ್ತೆ ಅಂತೆಲ್ಲಾ ಅವಾಚ್ಯ ಶಬ್ದಗಳಿಂದ ಬೈತಿದ್ಳಂತೆ. ಇದರಿಂದ ರೋಸಿಹೋಗಿದ್ದ ಸುರೇಂದ್ರ ಒಂದೇ ಸರಿ ಲಕ್ಷಾಧಿಪತಿ ಆಗಬೇಕು ಅಂತ ಹೀಗೆ ಉಂಡ ಮನೆಗೆ ಕನ್ನ ಹಾಕಿದ್ದಾನೆ.

 

ಇನ್ನು ಸುರೇಂದ್ರ ಹಣ ಕದ್ದು ವಿಜಯವಾಡಕ್ಕೆ ಹೋಗಿದ್ದಾನೆ. ಅಲ್ಲಿ ಕದ್ದ ಚಿನ್ನ, ಡೈಮಂಡ್ ಮಾರಲು ಆಗದೆ ರೂಂ ಒಂದರಲ್ಲಿ ಬಚ್ಚಿಟ್ಟಿದ್ದ. ಸದ್ಯ ಮಹದೇವಪುರ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇಂತಾ ವಿಶ್ವಾಸಘಾತುಕರಿಗೆ ಕೆಲಸ ಕೊಡೋ ಮೊದಲು ಜನ ಯೋಚಿಸ್ಬೇಕಿದೆ.