March 14, 2025

ವರದಕ್ಷಿಣೆ ಕಿರುಕುಳ: ಪತಿಯ ಮನೆ ಮುಂದೆಯೇ ಪತ್ನಿಯ ಅಂತ್ಯಸಂಸ್ಕಾರ…..!?

Spread the love

ಕೋಲಾರ :

ಜಿಲ್ಲೆಯ ತುರಾಂಡಹಳ್ಳಿಯಲ್ಲಿ, ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಶವವನ್ನು ಮಹಿಳೆಯ ಕುಟುಂಬಸ್ಥರು ಗಂಡನ ಮನೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. 24 ವರ್ಷದ ಮಾನಸ ಎಂಬ ಮಹಿಳೆ ಸಾವಿಗೆ ಒಳಗಾದವರು. ಮಾನಸನ ಸಾವಿಗೆ ನಿಖರ ಕಾರಣವೆಂಬುದಾಗಿ ತಿಳಿದು ಬಂದಿಲ್ಲ ಸದ್ಯ ಗಂಡನ ಮನೆಯವರು ಪರಾರಿಯಾಗಿದ್ದಾರೆ.

ಮಾಹಿತಿಯ ಪ್ರಕಾರ, ಕೌಟುಂಬಿಕ ಕಲಹಗಳಿಂದ ಮಾನಸ ತವರು ಮನೆ ಸೇರಿದ್ದಾಗ, ಗಂಡನ ಮನೆ ಪುನಃ ವರದಕ್ಷಿಣೆ ಕೇಳುವುದಾಗಿ ಕಿರುಕುಳ ನೀಡಿ ಆಕೆಗೆ ನೋಟಿಸ್ ಕಳುಹಿಸಿತ್ತು. ಇದರಿಂದ ಮನ ನೊಂದ ಮಾನಸ, ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದೆ ಮತ್ತು ಡೆತ್ ನೋಟ್ ಬರೆದಿದ್ದಾರೆ.

ಈ ಘಟನೆ ಶೋಕದ ಸಂಗತಿಯಾಗಿದ್ದು  ಕುಟುಂಬಸ್ಥರು ನ್ಯಾಯಕ್ಕಾಗಿ ಗಂಡನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ .  ಸಾವಿನ ಖಚಿತ ಮಾಹಿತಿಯು ಪೊಲೀಸರ ತನಿಖೆಯಲ್ಲಿ ತಿಳಿಯಲಾಗಿದೆ .