
ಬೆಂಗಳೂರು:
ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿಪುರದಲ್ಲಿ ಭಾನುವಾರ ಒಂದು ವಿಷಾದಕರ ಘಟನೆ ಸಂಭವಿಸಿದೆ. ವಾಹನ ಚಾಲಕನಾದ ಅರುಣ್ ಕುಮಾರ್ (37) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರುಣ್ ಅವರ ತಾಯಿ ಸರಸ್ವತಿ (78) ಅವರ ಸಾವನ್ನು ನೋಡಿ ಕಣ್ಣೀರಿಡುತ್ತಾ ಅವರು ಕೂಡಾ ಸಾವನ್ನಪ್ಪಿದ್ದಾರೆ.
ಅರುಣ್ ಕುಮಾರ್ ಅವರ ಆತ್ಮಹತ್ಯೆ ಮಾಡಿಕೊಂಡು, ತಾಯಿ ಸರಸ್ವತಿಯನ್ನು ಅವರ ಮಗನ ಮೃತದೇಹದ ಮುಂದೆ ಕಣ್ಣೀರಿಡುತ್ತಾ ಸಾವನ್ನಪ್ಪಿರುವುದರಿಂದ ಈ ಘಟನೆ ಇನ್ನಷ್ಟು ದುಃಖಕರವಾಗಿದೆ. ಅರುಣ್ ಅವರು ಸಾಲ ಭಾದೆಯಿಂದ ಬಳಲುತ್ತಿದ್ದರು ಮತ್ತು ಅವರ ತಾಯಿಗೆ ಒಂದು ವರ್ಷ ಇಂದೇ ಬೆನ್ನುಮೂಳೆ ಮುರಿತದಿಂದ ಬಳಲುತ್ತಿದ್ದರು. ಈ ಎಲ್ಲ ಒತ್ತಡಗಳು ಅವರ ಮೇಲೆ ಮಾನಸಿಕ ಪರಿಣಾಮ ಬೀರಿದ್ದು, ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ತಾಯಿ ಮತ್ತು ಮಗನ ಸಾವಿನ ನಂತರ ,ಸ್ಥಳೀಯರಲ್ಲಿ ಶೋಕಾಸಕ್ತಿಯ ವಾತಾವರಣವನ್ನು ಸೃಷ್ಟಿಸಿದೆ. ಈ ಘಟನೆ ಕುಟುಂಬಸ್ಥರಲ್ಲಿ ಸಂಕಟ ಮತ್ತು ನೋವನ್ನು ಉoಟುಮಾಡಿತ್ತು,ಸಾವಿನ ನಿಖರ ಕಾರಣಗಳನ್ನು ಪತ್ತೆಹಚ್ಚಲು ಪೊಲೀಸ್ ತನಿಖೆ ಮುಂದುವರಿಯುತ್ತಿದೆ.