
ಕೋಲಾರ ಜಿಲ್ಲೆ
ಮುಳಬಾಗಿಲು: ನಗರದ ಅಶ್ವತ್ಥನಾರಾಯಣಶೆಟ್ಟಿ ಬಡಾವಣೆಯಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿ ದಿವ್ಯಶ್ರೀ (46)ರನ್ನು ಬುಧವಾರ ರಾತ್ರಿ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ. ಈ ಕ್ರೂರ ಕೊಲೆಯು ಸುತ್ತಮುತ್ತಲಿನವರಲ್ಲಿ ಭಯಭೀತಿಯನ್ನು ಉಂಟುಮಾಡಿದೆ.
ಮನೆಯಲ್ಲಿಯೇ ಟಿವಿ ನೋಡುತ್ತಿದ್ದ ದಿವ್ಯಶ್ರೀಗೆ ರಾತ್ರಿ 7.30ರ ಸುಮಾರಿಗೆ ಮೂವರು ಅಪರಿಚಿತ ವ್ಯಕ್ತಿಗಳು ಏಕಾಏಕಿ ತಮ್ಮ ಮನೆಯಲ್ಲಿ ಪ್ರವೇಶಿಸಿದರು. ಅವರು ಶಿಕ್ಷಕಿಯ ಕುತ್ತಿಗೆ ಕೊಯ್ದು ಪರಾರಿಯಾಗಿ ಹೋಗಿದ್ದಾರೆ. ಮನೆ ಮೇಲ್ಭಾಗದಲ್ಲಿ ಇದ್ದ ಪುತ್ರಿ ಕೆಳಗೆ ಬರುವಷ್ಟರಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ದಿವ್ಯಶ್ರೀ, ಮುಳಬಾಗಿಲು ತಾಲ್ಲೂಕಿನ ಮುಡಿಯನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ. ಅವರ ಪತಿ ಪದ್ಮನಾಭಶೆಟ್ಟಿ ಅವರು ಹಣಕಾಸು ವ್ಯವಹಾರ ಮತ್ತು ಊದುಬತ್ತಿ ಕಾರ್ಖಾನೆ ಮಾಲೀಕರಾಗಿದ್ದಾರೆ. ಕೊಲೆಯ ನಂತರ ಕೋಲಾರದಿಂದ ಬೆರಳಚ್ಚು ತಜ್ಞರು, ಎಫ್‌ಎಸ್‌ಎಲ್ ತಜ್ಞರು ಮತ್ತು ಶ್ವಾನ ದಳವು ಸ್ಥಳಕ್ಕೆ ಆಗಮಿಸಿ ಮಾದರಿ ಸಂಗ್ರಹಿಸಿದ್ದಾರೆ.
ಸುದ್ದಿಯು ಪ್ರಸಾರಗೊಂಡ ತಕ್ಷಣ ಶಾಸಕ ಸಮೃದ್ಧಿ ವಿ.ಮಂಜುನಾಥ, ಎಸ್‌ಪಿ ಬಿ.ನಿಖಿಲ್, ತಹಸೀಲ್ದಾರ್ ಬಿ.ಎಸ್.ವೆಂಕಟಾಚಲಪತಿ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳು ರವಿಶಂಕರ, ಜಗದೀಶ್, ಡಿವೈಎಸ್ಪಿ ಡಿ.ಸಿ.ನಂದಕುಮಾರ್, ನಗರ ಠಾಣೆ ಇನ್‌ಸ್ಪೆಕ್ಟರ್ ಎಚ್.ಎಮ್.ಶಿವಕುಮಾರ್, ಗ್ರಾಮಾಂತರ ಠಾಣೆ ಸಿಪಿಐ ಕೆಜಿ ಸತೀಶ್, ಪಿಎಸ್‌ಐಗಳಾದ ವಿಠಲ್ ವೈ.ತಳವಾರ್, ಎಲ್.ಮಮತಾ, ನಂಗ್ಲಿ ಠಾಣೆಯ ಪಿಎಸ್‌ಐ ಅರ್ಜುನ್, ಆರ್.ಎಸ್.ಗೌಡ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಪಲಿಸರು ತನಿಖೆ ಕೈಗೊಂಡಿದ್ದಾರೆ.