March 14, 2025

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ. ವಿ. ರಿಂದ ಸಾಹಸಿ ಸಿಬ್ಬಂದಿಗಳಿಗೆ ಶ್ಲಾಘನೆಗೆ..!

Spread the love

ತುಮಕೂರು:

ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣೆಯ ಸಾಹಸಿ ಸಿಬ್ಬಂದಿಗಳು ದೊಡ್ಡಲಿಂಗಯ್ಯ ಮತ್ತು ಮೋಹನ್ ಅವರು ಕುಖ್ಯಾತ ಆರೋಪಿ ಮಂಜೇಶ್ @ಮಂಜ @ಚೌಟ್ರಿಮಂಜ @ಹೊಟ್ಟೆ ಮಂಜನನ್ನು ಬಂಧಿಸಿದ ಕಾರಣಕ್ಕೆ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ. ವಿ. ಐಪಿಎಸ್‌ರಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ. ತಮ್ಮ ಧೈರ್ಯ ಹಾಗೂ ತಂತ್ರದ ಮೂಲಕ ಈ ಅಪರಾಧಿಯನ್ನು ಹಿಡಿದುಕೊಂಡದ್ದಕ್ಕಾಗಿ, ಅಶೋಕ್ ಕೆ. ವಿ. ಅವರು ಪೊಲೀಸರು ದೊಡ್ಡಲಿಂಗಯ್ಯ ಮತ್ತು ಮೋಹನ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಪ್ರಕರಣದಲ್ಲಿ ತೋರಿದ ಪ್ರಮಾಣಿಕತೆ ಹಾಗೂ ಶ್ರೇಷ್ಠ ಸೇವೆಯನ್ನು ಮೆಚ್ಚಿ, ಅವರಿಗೆ ಪ್ರಶಂಸಾಪತ್ರ ನೀಡಿ ಗೌರವಿಸಿದರು.



ಅವರು ಒಬ್ಬ ಪ್ರಪ್ರಥಮ ದರ್ಜೆ ಅಧಿಕಾರಿಯಾಗಿ ತಮ್ಮ ಕರ್ತವ್ಯಕ್ಕೆ ಬದ್ಧವಾಗಿರುವಂತೆ ಮುಂದೆಯೂ ತಮ್ಮ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು. ಕುಖ್ಯಾತ ಆರೋಪಿ ಮಂಜನ ಬಂಧನವು ಕೊರಟಗೆರೆ ಪೊಲೀಸ್ ಠಾಣೆಯ ಮತ್ತೊಂದು ಸಾಧನೆ ಎಂದು ಕರೆದಿರುವ ಅಶೋಕ್ ಕೆ. ವಿ. ಅವರು, ಇಂತಹ ಕಾರ್ಯಗಳಿಂದ ಸಾರ್ವಜನಿಕರು ಪೊಲೀಸರ ಮೇಲೆ ನಂಬಿಕೆ ಇಟ್ಟುಕೊಳ್ಳಲು ಪ್ರೋತ್ಸಾಹ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಘಟನೆಯು ತುಮಕೂರು ಜಿಲ್ಲೆಯಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ ಮತ್ತು ಮತ್ತೊಮ್ಮೆ, ಪೊಲೀಸ್ ಇಲಾಖೆಯ ಸಮರ್ಥತೆ ಹಾಗೂ ಕಾರ್ಯಕ್ಷಮತೆಯನ್ನು ಬಹಿರಂಗಪಡಿಸಿದೆ.