
ಮಂಡ್ಯ ಜಿಲ್ಲೆ :
ಕಾವೇರಿ ಪ್ರವಾಹದಿಂದ ತೀವ್ರ ಹಾನಿಗೊಳಗಾದ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ತಾಯಿ ಸುನೀತಾ ಪುಟ್ಟಣ್ಣಯ್ಯ ಭೇಟಿ ನೀಡಿ, ಹೊಳೆಯ ಅಂಚಿನ ಮನೆಗಳ ನಿವಾಸಿಗಳಿಗೆ ಧೈರ್ಯ ತುಂಬಿದರು. ಪ್ರವಾಹದಿಂದ ಮನೆ, ಬೆಳೆ, ಹಾಗೂ ಹಾಸುಹೊಕ್ಕು ಹಾಳಾದ ಪರಿಸ್ಥಿತಿಯನ್ನು ಕಂಡು ಮನ ಕಲುಕಿದ ಸುನೀತಾ ಪುಟ್ಟಣ್ಣಯ್ಯ, ನೆರೆಪೀಡಿತರಿಗೆ ಸರ್ಕಾರದ ನೆರವು ತಕ್ಷಣ ಲಭ್ಯವಾಗಬೇಕೆಂದು ತಹಸಿಲ್ದಾರ್ ರವರಿಗೆ ಸೂಚಿಸಿದರು.
ಅವರು ಪ್ರವಾಹದಿಂದ ಪೀಡಿತ ಗ್ರಾಮಸ್ಥರೊಂದಿಗೆ ಮಾತನಾಡಿ, ಅವರಿಗೆ ಸಾಂತ್ವನ ಹೇಳುವ ಮೂಲಕ ಅವರ ಕಷ್ಟಗಳನ್ನು ಹಂಚಿಕೊಂಡರು. ಸುನೀತಾ ಪುಟ್ಟಣ್ಣಯ್ಯ ಅವರು ತಹಸಿಲ್ದಾರ್ ರಿಗೆ ಪ್ರವಾಹ ಪರಿಹಾರಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದರು. ಅವರು ಸ್ಥಳೀಯ ಆಡಳಿತಕ್ಕೆ ರಾಜ್ಯ ಸರ್ಕಾರದಿಂದ ನೆರವು ತಕ್ಷಣ ದೊರಕಬೇಕೆಂದು, ಸ್ಥಳದಲ್ಲಿಯೇ ಪರಿಹಾರ ಕಾರ್ಯಗಳು ಕೂಡಲೇ ಪ್ರಾರಂಭವಾಗಬೇಕೆಂದು ಹೇಳಿದರು.
ಪ್ರವಾಹದ ಹಾನಿ ಮತ್ತು ಪುನಃನಿರ್ಮಾಣದ ಅಗತ್ಯಗಳನ್ನು ತಮ್ಮ ಮಾತುಗಳ ಮೂಲಕ ಗಂಭೀರವಾಗಿ ವ್ಯಕ್ತಪಡಿಸಿದ ಸುನೀತಾ ಪುಟ್ಟಣ್ಣಯ್ಯ ಅವರ ಈ ಭೇಟಿ ಗ್ರಾಮಸ್ಥರ ಮನೋಬಲವನ್ನು ಹೆಚ್ಚಿಸಿದೆ. ಈ ಭೇಟಿಯು ಸರ್ಕಾರದ ಗಮನವನ್ನು ಕಡೆಯೇಸೆದು, ಪ್ರವಾಹಪೀಡಿತರಿಗೆ ತಕ್ಷಣ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲು ಪ್ರೇರಣೆ ನೀಡಿತು.