
ಗ್ರಾಮ ಪಂಚಾಯಿತಿಗಳಲ್ಲಿ ಹಣಕಾಸು ದುರುಪಯೋಗ ಮತ್ತು ಅವ್ಯವಹಾರ ಪ್ರಕರಣಗಳ ನಿರ್ವಹಣೆಗೆ ಹೊಸ ದಾರಿ ತೋರಿದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. ನವೀನ ನಡಾವಳಿ ರೂಪಿಸಿದ್ದು, ಇದರಡಿ ಈ ಹಿಂದೆ ಆದ ಅವ್ಯವಹಾರ ಪ್ರಕರಣಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (PDO) ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನೂ ಹೊಣೆಗಾರರನ್ನಾಗಿ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಈ ಬದಲಾವಣೆಯ ನಿರ್ಧಾರವನ್ನು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆಯಲ್ಲಿ ಚರ್ಚಿಸಿ, ಅವ್ಯವಹಾರಗಳ ಸ್ವರೂಪ, ಅದಕ್ಕೆ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ವರದಿ ಕೇಳಲಾಗಿದೆ.
ಇನ್ನು ಮುಂದೆ, ಯಾವಾಗಲೋ ಆಗಿರುವ ಹಣಕಾಸು ದುರುಪಯೋಗ ಅಥವಾ ಅವ್ಯವಹಾರದಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಪಾಲುದಾರಿಕೆ ಇದ್ದರೆ, ಅವುಗಳನ್ನು ಸಮಗ್ರವಾಗಿ ಪರಿಶೀಲಿಸಿ, ನಿರ್ಧಾರ ಕೈಗೊಳ್ಳಲಾಗುವುದು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 2006 ತಿದ್ದುಪಡಿಯಂತೆ, ಜಂಟಿ ಸಹಿ ಕಡ್ಡಾಯವನ್ನು ಬಲಪಡಿಸಲಾಗಿದೆ.
ಈ ಕ್ರಮಗಳಿಂದ, ಗ್ರಾಮ ಪಂಚಾಯಿತಿಗಳಲ್ಲಿ ಹಣಕಾಸು ದುರುಪಯೋಗಗಳ ಮೇಲೆ ನಿಯಂತ್ರಣ ಮೂಡಿಸುವ ಹಿತಾಸಕ್ತಿಯು ಕಂಡುಬರುತ್ತಿದೆ. ಇದರಿಂದ ಆಡಳಿತದಲ್ಲಿ ಸಾಚಾರಿತ್ಯತೆ, ಭ್ರಷ್ಟಾಚಾರ ತಡೆಗಟ್ಟುಲು ಕ್ರಮ ಕೈಗೊಳ್ಳಲಾಗಿದೆ….