March 14, 2025

ರಾಜ್ಯದಲ್ಲಿ ಧಾರಾಕರವಾಗಿ ಮಳೆ ಸುರಿದರು ನೀರೇ ಕಾಣದ ಕೆರೆ….

Spread the love

ಮಳವಳ್ಳಿ :

ತಾಲ್ಲೂಕಿನ ಹಲಗೂರು ಕೆರೆಗೆ ಕಾವೇರಿ ನದಿಯಿಂದ ನೀರು ಹರಿಸಬೇಕೆಂದು ಸಮಾಜ ಸೇವಕ ಮಳವಳ್ಳಿ ಮಂಜುನಾಥ ಒತ್ತಾಯಿಸಿದ್ದಾರೆ. ಅವರು ಹಲಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡಿಗೆ ಸಾವಿರಾರು ಕ್ಯೂಸೆಕ್ಸ್ ಕಾವೇರಿ ನೀರನ್ನು ಹರಿಸುತ್ತಿರುವ ಸರ್ಕಾರ, ಕೆಲವೇ 5 ಕಿಲೋ ಮೀಟರ್ ದೂರದಲ್ಲಿರುವ ಹಲಗೂರು ಕೆರೆಗೆ ನೀರು ಹರಿಸುವಲ್ಲಿ ಮೀನಾವೇಷ ತೋರುತ್ತಿದೆ ಎಂದು ಆರೋಪಿಸಿದರು.

ಮಳವಳ್ಳಿ ಮಂಜುನಾಥ ಅವರು ಹೇಳಿದರು, “ಕೆರೆಗಳಿಗೆ ನೀರು ತುಂಬಿಸುವುದರಿಂದ ಇಲ್ಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಆದರೆ ಸರ್ಕಾರ ಈ ಕಡೆ ಗಮನ ಹರಿಸುತ್ತಿಲ್ಲ. ನಾವು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ.”

ಸಮಾಜ ಸೇವಕರು ಈ ಕುರಿತು ಮುಂದಿನ ದಿನಗಳಲ್ಲಿ ಇನ್ನಷ್ಟು ಒತ್ತಡವನ್ನು ಸರ್ಕಾರದ ಮೇಲೆ ತರುವುದಾಗಿ ತಿಳಿಸಿದ್ದಾರೆ. “ಸರ್ಕಾರ ಕೆರೆಗೆ ನೀರು ಹರಿಸುವಂತೆ ಒತ್ತಾಯ ಮಾಡುತ್ತೇವೆ, ಇದರಿಂದ ಇಲ್ಲಿನ ಜನತೆ ಹಾಗೂ ರೈತರಿಗೆ ಸಹಾಯವಾಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು.