March 14, 2025

ದೋಷ ನಿವಾರಣೆ ಮಾಡುತ್ತೇನೆಂದು ಹೇಳಿ ಕರೆಸಿ ಯುವತಿ ಮೇಲೆ ಆತ್ಯಾಚಾರ.!?

Spread the love

ಹಾಸನ ಜಿಲ್ಲೆಯ ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್ (39) ಎಂಬಾತನನ್ನು ಬಾಗಲಗುಂಟೆ ಪೊಲೀಸ್ ಠಾಣೆಯ ಪೊಲೀಸರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿಸಿದ್ದಾರೆ. ದಯಾನಂದ್, ಮಾಂತ್ರಿಕ ಮತ್ತು ಹಸ್ತರೇಖೆ ನೋಡಿ ಜ್ಯೋತಿಷ್ಯ ಹೇಳುವನು. ಆರೋಪಿ, 26 ವರ್ಷದ ಯುವತಿ ಪುರದಮ್ಮ ದೇವಸ್ಥಾನಕ್ಕೆ ಹೋಗಿದಾಗ ಪರಿಚಯ ಮಾಡಿಕೊಂಡಿದ್ದು, ಆಕೆಗೆ ಮದುವೆಯ‌ಾಗುವ ಕಂಟಕವಿದೆ ಎಂದು ಹೇಳಿ ಭಯಮಾಡಿಸುತ್ತಿದ್ದ.

ದೋಷ ನಿವಾರಣೆಗಾಗಿ ಪೂಜೆ ಮಾಡುತ್ತೇನೆಂದು ಹಣ ಪಡೆದಿದ್ದ ಪೂಜಾರಿ ದಯಾನಂದ್, ಈ ಪ್ರಯುಕ್ತ ಆಕೆಯನ್ನು ಕರೆಸಿ, ಆತ್ಯಾಚಾರ ಎಸಗಿದ್ದಾನೆ ಎಂಬ ಆರೋಪವಿದೆ. ಪೂಜಾರಿ ಕಂ ಜ್ಯೋತಿಷಿಯು ಯುವತಿಯಿಂದ ಒಂದು‌ ಲಕ್ಷಕ್ಕಿಂತ ಹೆಚ್ಚು ಹಣ ಪಡೆದಿದ್ದು, ನಗ್ನ ವಿಡಿಯೋ ಮತ್ತು ಫೋಟೋಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ. ಬ್ಲಾಕ್ ಮೇಲ್ ಮಾಡುವಾಗ, ಹಣ ನೀಡದೇ ಇದ್ದಲ್ಲಿ ಆ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದೀಗ ಪೊಲೀಸರು ದಯಾನಂದ್‍ನನ್ನು ಬಂಧಿಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.