March 14, 2025

ಅಪಘಾತ ಹಿರಿಯ ಪತ್ರ ಕರ್ತ ಸಾವು….

Spread the love

ಮಂಡ್ಯ :

ಚಾಮರಾಜನಗರ-ಜೇವರ್ಗಿ ರಾಜ್ಯ ಹೆದ್ದಾರಿಯ ತೊಳಲಿ ಗ್ರಾಮದ ಸಮೀಪ, ಶುಕ್ರವಾರ ಸಂಜೆ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹಿರಿಯ ಪತ್ರಕರ್ತ ಬಿ. ಸಿ. ಮೋಹನ್ ಕುಮಾರ್ (೪೯) ಅವರು ದುರ್ಮರಣ ಹೊಂದಿದ ಘಟನೆ ನಡೆದಿದ್ದು, ತಾಲ್ಲೂಕಿನ ಕಸಬಾ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಸಿ. ಚಂದ್ರಪ್ಪ ಅವರ ಪುತ್ರರಾಗಿದ್ದಾರೆ.

ಮೋಹನ್ ಕುಮಾರ್ ಅವರು ಚಾಮರಾಜನಗರದಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪೂರೈಸಿದ್ದು, ಪತ್ರಕರ್ತ ವೃತ್ತಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅಪಘಾತದ ತೀವ್ರತೆಯಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಈ ದುರ್ಘಟನೆ ಸಂಬಂಧಿತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಕೂಡ ಸೇರಿಕೊಂಡು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಸಂದರ್ಭದಲ್ಲಿ ಲಾರಿಯು ವೇಗವಾಗಿ ಬಂದ ಪರಿಣಾಮ ಅಪಘಾತ ಸಂಭಾವಿಸಿರುವುದೆಂದು ತಿಳಿದು ಬಂದಿದೆ ,ಘಟನೆಯಲ್ಲಿ ಕಾರು ಸಂಪೂರ್ಣ ಹಾನಿಯಾಗಿದೆ.

ಮೋಹನ್ ಕುಮಾರ್ ಅವರ ಸಾವಿನಿಂದ ಪತ್ರಿಕಾ ಲೋಕದಲ್ಲಿ ತೀವ್ರ ಬೇಸರ ವ್ಯಕ್ತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲಾ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.