March 14, 2025

ಬ್ಯಾಂಕ್‌ನಲ್ಲಿ ಸಾಲ ಮರುಪಾವತಿ ಮಾಡದಿದ್ದರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬಹುದು..

Spread the love



ಮೊದಲನೆಯದಾಗಿ, ಸಾಲ ಮರುಪಾವತಿ ಮಾಡದೇ ಇರುವುದು ನಾಗರಿಕ ಅಪರಾಧವೇ ಹೊರತು ಕ್ರಿಮಿನಲ್ ಅಪರಾಧವಲ್ಲ. ಇದರಿಂದ ನಿಮಗೆ ಜೈಲು ಶಿಕ್ಷೆ ಆಗುವುದಿಲ್ಲ. ಆದರೆ, ಸಾಲ ತೀರಿಸದೇ ಇರುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ, ಇದರಿಂದ ಭವಿಷ್ಯದಲ್ಲಿ ನೀವು ಇನ್ನೊಂದು ಸಾಲ ಪಡೆಯಲು ಕಷ್ಟವಾಗಬಹುದು.

ಇನ್ನೂ ಮುಖ್ಯವಾಗಿ, ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಕಾನೂನು ಕ್ರಮ ಕೈಗೊಳ್ಳಬಹುದು ಮತ್ತು ನ್ಯಾಯಾಲಯದ ಮೂಲಕ ನಿಮ್ಮ ಆಸ್ತಿ ಜಪ್ತಿ ಮಾಡಬಹುದು. ಚೆಕ್ ಬೌನ್ಸ್ ಕೇಸ್ ಮಾತ್ರ ಕ್ರಿಮಿನಲ್‌ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಆರ್‌ಬಿಐನ ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಸಾಲ ಮರುಪಾವತಿ ಮಾಡಲು ವಿಫಲವಾಗುವ ಗ್ರಾಹಕರಿಗೆ ಬೆದರಿಕೆ ಹಾಕುವುದು ಅಥವಾ ಸಾರ್ವಜನಿಕವಾಗಿ ಅವಮಾನ ಮಾಡುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ, ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಕಾನೂನು ಸಲಹೆ ಪಡೆಯುವುದು ಮುಖ್ಯ.