
ಭದ್ರಾವತಿ ಆನವೇರಿ ಗುಡುಮಗಟ್ಟೆಯ ಭದ್ರ ಉಪಚಾನೆಲ್ ನಲ್ಲಿ ಈಜಲು ಹೋದ ಇಬ್ಬರು ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿಯೇ ಇಬ್ಬರ ಮೃತ ದೇಹ ಪತ್ತೆಯಾಗಿದೆ.
ಆನವೇರಿ ಭದ್ರ ಚಾನೆಲ್ ನಲ್ಲಿ ನಿನ್ನೆ ಸಂಜೆ ಈಜಲು ಹೋದ ಇಬ್ಬರು ಬಾಲಕರು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಅವರನ್ನ ಹುಡುಕಲು ಆರಂಭಿಸಿದ್ದರು.ಯುವಕರು ಎಲ್ಲೂ ಪತ್ತೆಯಾಗದ ಕಾರಣ ಚೆನೆಲ್ ನ ದಂಡೆಯ ಮೇಲೆ ಬಾಲಕರ ಬಟ್ಟೆಗಳು ಪತ್ತೆಯಾಗಿದ್ದವು. ಈ ಬೆನ್ನಲ್ಲೇ ಅಗ್ನಿಶಾಮಕ ದಳ ಮತ್ತು ಹೊಳೆಹೊನ್ನೂರು ಪೊಲೀಸರು ಶೋಧಕಾರ್ಯ ಆರಂಭಿಸಿದ್ದರು.
ರಾತ್ರಿಯೇ ಅವರ ಮೃತ ದೇಹ ಪತ್ತೆಯಾಗಿದೆ. ಮೃತರಾದವರನ್ನ ಆನ್ವೇರಿಯ ಉಮೇಶ್ ಶೆಟ್ಟಿಯವರ ಮಗ ರಜತ್ (10) ಮತ್ತು ಕುಂದಾಪುರದ ತೆಕ್ಕಟ್ಟೆ ನಿವಾಸಿ ನವೀನ್ ಶೆಟ್ಟಿ ಅವರ ಮಗ ರೋಹನ್ (15) ಎಂದು ಗುರುತಿಸಲಾಗಿದೆ.ಇಬ್ವರು ಬಾಲಕರು ಚಾನೆಲ್ ನೀರಿನಲ್ಲಿ ಈಜಲು ಹೋಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.