
ತುಮಕೂರು
ಅಮಾನಿಕರೆ ಸಮೀಪ ಸಂಭವಿಸಿದ ಭೀಕರ ಘಟನೆ ಜನರಲ್ಲಿ ಆತಂಕ ಸೃಷ್ಟಿಸಿದೆ. ಹಳೇಪಾಳ್ಯದಿಂದ ಕೋಡಿಸರ್ಕಲ್‌ಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಬೃಹತ್ ಚರಂಡಿಗೆ ಹಾರಿದ ಘಟನೆ ನಡೆದಿದ್ದು, ಕಾರಿನಲ್ಲಿ ಹಳೇಪಾಳ್ಯದ ಚೇತನ್ ಸೇರಿದಂತೆ ಮೂವರು ಯುವಕರು ಇದ್ದರು. ಈ ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳು ಮಾತ್ರವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಕೆರೆ ಏರಿಯ ಪಕ್ಕದಲ್ಲಿ ಮಳೆನೀರು ನಿತಾರಣ ಮಾಡಲು ಬೃಹದಾಕಾರದ ಚರಂಡಿಯನ್ನು ತೆರೆಯಲಾಗಿತ್ತು. ಈ ಚರಂಡಿಗೆ ತಡೆಗೋಡೆ ಇಲ್ಲದ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಘಟನೆಯ ನಂತರ ಸ್ಥಳೀಯರು ಚರಂಡಿಗೆ ತಕ್ಷಣ ತಡೆಗೋಡೆ ನಿರ್ಮಿಸಲು ಹಾಗೂ ಈ ರೀತಿಯ ಅಪಘಾತಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.