March 14, 2025

ಪಾವಗಡ ಪಟ್ಟಣದಲ್ಲಿ ಕಳ್ಳರ ಕೈಚಳಕ….

Spread the love

ತುಮಕೂರು

ಪಾವಗಡ ಪಟ್ಟಣದಲ್ಲಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ದಾರುಣ ಘಟನೆ ನಡೆದಿದೆ. ಜ್ಞಾನಭೂಧಿನಿ ಶಾಲೆ ಮುಂಭಾಗದಲ್ಲಿ ವಾಸವಿರುವ ಜಿಲಾನಿ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಳ್ಳರು ಮನೆಯ ಬೀಗವನ್ನು ಹೊಡೆದು ಒಳನುಗ್ಗಿ ಸುಮಾರು ಒಂದು ಲಕ್ಷ ರೂ. ನಗದು, 13 ಚಿನ್ನದ ಉಂಗುರಗಳು, ಒಂದು ಜೋಡಿ ಚಿನ್ನದ ಕಿವಿಯ ಓಲೆ, ಮೂರು ಜೋಡಿ ಬೆಳ್ಳಿ ಚೈನ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡಿದ ಆಭರಣಗಳ ಒಟ್ಟು ಮೌಲ್ಯ ಸುಮಾರು ನಾಲ್ಕು ಲಕ್ಷ ರೂ. ಅಷ್ಟಾಗಿದೆ. ಕಳ್ಳರು ತಮ್ಮ ಕೈಚಳಕವನ್ನು ತೋರಿಸಿ, ವಸ್ತುಗಳನ್ನು ಕದ್ದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಘಟನೆಯ ಬಗ್ಗೆ ಪಾವಗಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರ ತಂಡವು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದೆ. ಕಳ್ಳತನದ ಘಟನೆ ಸಂಭವಿಸಿದ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಸ್ಥಳೀಯರು ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಂಡು, ಕಳ್ಳರನ್ನು ಶೀಘ್ರದಲ್ಲಿಯೇ ಬಂಧಿಸುವ ಭರವಸೆ ನೀಡಿದ್ದಾರೆ. ಈ ಕಳ್ಳತನದ ಘಟನೆ ಪಾವಗಡ ಪಟ್ಟಣದಲ್ಲಿ ಅಸುರಕ್ಷಿತತೆಯ ಭಾವನೆ ಮೂಡಿಸುತ್ತಿದ್ದು, ಜನತೆಯಲ್ಲಿ ಭಯದ ವಾತಾವರಣವನ್ನೂ ಸೃಷ್ಟಿಸಿದೆ.