
ಹೊಳಲ್ಕೆರೆ :
ತಾಲೂಕಿನ ಬಾಲೇನಹಳ್ಳಿ ಗ್ರಾಮದ 70 ವರ್ಷದ ವೃದ್ದೆ ಬಸಮ್ಮ ಅವರ ಚಿನ್ನದ ಸರ ಕಳ್ಳತನವಾಗಿರುವ ಘಟನೆ ನಡೆದಿದೆ. ತಮ್ಮ ಜಮೀನಿಗೆ ಹೋಗಿ ವಾಪಸಾಗಿ ಮನೆಗೆ ಹೋಗುವಾಗ,
ಬೈಕ್ ನಲ್ಲಿ ಬಂದ ವ್ಯಕ್ತಿ_ಬಸಮ್ಮ ಅವರನ್ನು ಅಡ್ಡಗಟ್ಟಿ, ಅವರ ಕೊರಳಲ್ಲಿ ಇದ್ದ 4 ಲಕ್ಷ ರೂಪಾಯಿ ಮೌಲ್ಯದ 4 ತೊಲ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ವಿಷಯವನ್ನು ವೃದ್ದೆ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳೀಯ ಪಿಎಸ್ ಐ ಶಿವರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ಆರಂಭಿಸಿದ್ದಾರೆ.ಈಗಾಗಲೇ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದ್ದು, ತಮ್ಮ ಆಭರಣಗಳನ್ನು ಜಾಗ್ರತೆಯಿಂದ ಧರಿಸುವಂತೆ ತಿಳಿಸಲಾಗಿದೆ.
ಪೊಲೀಸರು ಕಳ್ಳನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಜನರು ಈ ವಿಷಯದಲ್ಲಿ ಹೆಚ್ಚು ಜಾಗ್ರತೆಯಿರಲು ಪೊಲೀಸರ ಮನವಿ.