
ಚಿತ್ರದುರ್ಗ :
ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಹೊಳಲ್ಕೆರೆಯಲ್ಲಿ ಪಟ್ಟಣ ಪಂಚಾಯಿತಿಯಿಂದ, ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಫಾಗಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ವಾಸೀಂ ಹೇಳಿದರು. ಅವರು ಹೊಳಲ್ಕೆರೆಯಲ್ಲಿ ಮಾತನಾಡುತ್ತಿದ್ದರು. ಡೆಂಗ್ಯೂ ಹರಡದಂತೆ ತಡೆಗಟ್ಟಲು, ಸೊಳ್ಳೆಗಳ ನಿಯಂತ್ರಣ ಅಗತ್ಯವಾಗಿದ್ದು, ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪೌರ ಕಾರ್ಮಿಕರು , ಆರೋಗ್ಯ ಇಲಾಖೆ ಮತ್ತು ಪುರಸಭಾ ಸಿಬ್ಬಂದಿಗಳು ಸೊಳ್ಳೆ ನಿವಾರಣೆಗಾಗಿ ಶ್ರಮಿಸುತ್ತಿದ್ದಾರೆ.
ಜನತೆ ಕೂಡ ಇದರಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ತಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ನೀರಿನ ಒಣಹೊರೆಗಳು ಸರಿಯಾಗಿ ಮುಚ್ಚುವುದು, ಮನೆಗಳಲ್ಲಿರುವ ಹಳೆಯ ಬಾಟಲುಗಳು, ಟೈರುಗಳು ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
ಡೆಂಗ್ಯೂ ನಿಯಂತ್ರಣದ ಮುಂಜಾಗ್ರತೆಯಾಗಿದೆ ಎಂದರು, ಸಾರ್ವಜನಿಕರ ಜೊತೆಗೆ ನೀತಿ ಪಾಲನೆ, ಆರೋಗ್ಯದ ಕಡೆ ಗಮನ ಹರಿಸುವುದು ಅತ್ಯವಶ್ಯವಾಗಿದೆ. ಈ ಎಲ್ಲ ಕ್ರಮಗಳು ಸತತವಾಗಿ ಮುಂದುವರಿಯಲಿದ್ದು, ಡೆಂಗ್ಯೂ ನಿಯಂತ್ರಣ ಯಶಸ್ವಿಯಾಗುವಂತೆ ಮಾಡಲಾಗುವುದು ಎಂದು ಹೇಳಿದರು.