March 15, 2025

ಕಾರು ಮತ್ತು ಆಟೋ ನಡುವೆ ಆಪಘಾತ ಮಹಿಳೆ ಸಾವು..!

Spread the love

ಮಳವಳ್ಳಿ:

ಮೈಸೂರಿನ ವೀರನಗೆರೆ ನಿವಾಸಿ ಉಮಾ ಅವರ ಸಾವಿಗೆ ಕಾರಣವಾದ ಈ ದುರಂತ ಘಟನೆ ನಿನ್ನೆ ಮಧ್ಯಾಹ್ನ ನಡೆದಿದ್ದು, ಬೆಂಗಳೂರಿನಿಂದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿಗೆ ತೆರಳಿದ್ದ ಬಳಿಕ ಮರಳುತ್ತಿದ್ದ ವೇಳೆ, ತಾಲೂಕಿನ ದುಂಡನಹಳ್ಳಿ ಬಳಿ ಕಾರು ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಉಮಾ ತೀವ್ರ ರಕ್ತಸ್ರಾವದಿಂದ ತಕ್ಷಣ ಸಾವನ್ನಪ್ಪಿದ್ದಾರೆ.

ಮೃತರು ಉಮಾ ಅವರೊಂದಿಗೆ ಸ್ನೇಹಿತರಾದ ಅನಿತಾ ಮತ್ತು ಸಿಂಧೂ ಸಹ ದೇವಸ್ಥಾನಕ್ಕೆ ಹೋಗಿದ್ದರು ದೇವರ ದರ್ಶನ ಮುಗಿಸಿಕೊಂಡು, ಮದ್ದೂರಿಗೆ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಅವರ ಕುಟುಂಬದ ಸದಸ್ಯರಿಗೆ ಆಘಾತಕಾರಿಯಾಗಿದೆ.

ಈ ದುರಂತದಿಂದಾಗಿ ರಸ್ತೆ ಸುರಕ್ಷತೆಯ ಕುರಿತಾಗಿ ಮತ್ತೊಮ್ಮೆ ಗಮನ ಹರಿಸಲು ಸಾರ್ವಜನಿಕರು ಅರಿವು ಮೂಡಿಸಿದೆ . ವಾಹನ ಚಾಲಕರ ಅತೀವೇಗದ ಪರಿಣಾಮ ಇಂತಹ ದುರಂತಗಳು ಸಂಭವಿಸುತ್ತವೆ ಎಂಬುದನ್ನು ಮನಗಾಣಿಸಿಕೊಳ್ಳಬೇಕು