March 15, 2025

ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಆರೋಪಿ ಕಾಲಿಗೆ ಗುಂಡು……

Spread the love

ಶಿವಮೊಗ್ಗ :

ವಿನೋಬ ನಗರ ಪೊಲೀಸ್ ಠಾಣ ವ್ಯಾಪ್ತಿಯ ಕೊಲೆ ಆರೋಪಿ ರಜಾಕ್, ತನಗೆ ಬಂಧನಕ್ಕೆ ಆಗಮಿಸಿದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದನು. ರಜಾಕ್‌ನ ಮೇಲೆ 307 ಪ್ರಕರಣ ಮತ್ತು ಗಾಂಜಾ ಪ್ರಕರಣಗಳು ಸೇರಿದಂತೆ ಐದು ಪ್ರಕರಣಗಳು ದಾಖಲಾಗಿವೆ.

ಹಲವಾರು ದಿನಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ರಜಾಕ್, ತುಂಗ ನಗರ ಮತ್ತು ವಿನೋಬ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದನು.

ರಜಾಕ್ ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯ ತ್ಯಾಜವಳ್ಳಿಯ ಕಾಡಿನಲ್ಲಿ ಅಡಗಿ ಕುಳಿತಿದ್ದಾನೆ ಎಂಬ ಮಾಹಿತಿ ಹೊಳೆಹೊನ್ನೂರು ಪೊಲೀಸ್ ಠಾಣೆ ಪಿಐ ಲಕ್ಷ್ಮಪತಿಗೆ ಲಭ್ಯವಾಯಿತು. ಪಿಐ ಲಕ್ಷ್ಮಿಪತಿ ಮತ್ತು ಸಿಬ್ಬಂದಿ ಆತನನ್ನು ಬಂಧಿಸಲು ತೆರಳಿದಾಗ, ರಜಾಕ್ ಪೊಲೀಸ್ ಅರ್ಜುನ್ ಮೇಲೆ ಹಲ್ಲೆ ಮಾಡಿದ್ದಾನೆ.

ಪರಿಸ್ಥಿತಿ ಕೈಮೀರಿ, ಪಿಐ ಲಕ್ಷ್ಮಿಪತಿ ರಜಾಕ್‌ ವಿರುದ್ಧ ಎಚ್ಚರಿಕೆ ನೀಡಿದರು ಮತ್ತು ಒಂದೇ ಸುತ್ತು ಗುಂಡು ಹಾರಿಸಿದರು. ಆದರೆ, ಮಾತು ಕೇಳದ ರಜಾಕ್ ಹಲ್ಲೆಗೆ ಮುಂದಾದಾಗ, ಪಿಐ ಲಕ್ಷ್ಮಿಪತಿ ರಜಾಕ್ ಕಾಲಿಗೆ ಗುಂಡು ಹೊಡೆದು ಬಂಧಿಸಿದರು.

ರಜಾಕ್ ಮತ್ತು ಗಾಯಗೊಂಡ ಪೊಲೀಸ್ ಸಿಬ್ಬಂದಿ ಅರ್ಜುನ್ ಅವರನ್ನು ಮೆಗ್ಗಾನ್ ಆಸ್ಪತ್ರೆಯ ಜೈಲ್ ವಾರ್ಡ್ ಗೆ ದಾಖಲಿಸಲಾಯಿತು.