
ತುಮಕೂರು
ಸರ್ಕಾರಿ ಆದೇಶದಂತೆ ಪೌತಿ/ವಾರಸಾ ಖಾತೆ ಆಂದೋಲನ ಪ್ರಕ್ರಿಯೆ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಸೇವೆ ಸಲ್ಲಿಸಿರುವ ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಸೀತಕಲ್ಲು ವೃತ್ತದ ಗ್ರಾಮ ಸಹಾಯಕ ಲಕ್ಷ್ಮಣ್ ರನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶನಿವಾರ ಪ್ರಶಂಸಿಸಿದ್ದಾರೆ. ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತರ ಉತ್ತರಾಧಿಕಾರಿ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನನ್ನು ಅಭಿವೃದ್ಧಿಪಡಿಸಲು, ಅನುಕೂಲಕರವಾಗಿ ಉಪಯೋಗಿಸಲು ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಅಳವಡಿಸಲು ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಈ ಆಂದೋಲನದ ಪ್ರಾಮುಖ್ಯತೆ ಇರುತ್ತದೆ.
ಗ್ರಾಮ ಸಹಾಯಕ ಲಕ್ಷ್ಮಣ್ ಅವರು ಈ ಪೌತಿ/ವಾರಸಾ ಪ್ರಕ್ರಿಯೆಯನ್ನು ಸುಗಮವಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸಿದ್ದು, ಅನೇಕ ರೈತರ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಅತ್ಯುತ್ತಮ ಸೇವೆ ಸಲ್ಲಿಸಿರುವುದರಿಂದ ಜಿಲ್ಲಾಧಿಕಾರಿ ಅವರು ಅವರಿಗೆ ಪ್ರಶಂಸಾ ಪತ್ರ ನೀಡುವುದರ ಮೂಲಕ ಗೌರವಿಸಿದ್ದಾರೆ.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಗ್ರಾಮ ಸಹಾಯಕರ ಶ್ರಮವನ್ನು ಸರ್ಕಾರವನ್ನು ಹಾಗೂ ಗ್ರಾಮೀಣ ರೈತರ ಸಮಸ್ಯೆಗಳನ್ನು ನಿವಾರಿಸಲು ಬಹುದೊಡ್ಡ ಸೇವೆಯಾಗಿದೆ” ಎಂದು ಭಾವಿಸಿದರು. ಇದರಿಂದಾಗಿ ಗ್ರಾಮ ಸಹಾಯಕ ಲಕ್ಷ್ಮಣ್ ಅವರಂತಹ ನಿಷ್ಠಾವಂತ ಮತ್ತು ಶ್ರದ್ಧಾವಂತ ಅಧಿಕಾರಿಗಳು ಇನ್ನಷ್ಟು ಉತ್ತೇಜನ ಪಡೆದಿದ್ದಾರೆ.