
ಇತ್ತೀಚೆಗೆ ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಜಿರಳೆಗಳು, ನೊಣಗಳು ಮತ್ತು ಮಾನವ ಬೆರಳುಗಳು ಪತ್ತೆಯಾಗಿದ್ದು, ಈಗ ಕರ್ನಾಟಕದ ತುಮಕೂರಿನಲ್ಲಿ ಮುಚ್ಚಿದ ಕೂಲ್ ಡ್ರಿಂಕ್ ಬಾಟಲಿಯಲ್ಲಿ ಸತ್ತ ಜೇಡ ಪತ್ತೆಯಾದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯ ವಿಡಿಯೋ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದೆ.
ಸ್ಥಳೀಯ ನಿವಾಸಿಗಳು ಮತ್ತು ನೆಟ್ಟಿಗರು ಆಹಾರ ಮತ್ತು ಪಾನೀಯ ತಯಾರಿಕೆಯಲ್ಲಿ ಉಂಟಾಗುವ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಬಾಟಲ್ ತಯಾರಿಸಿದ ಕಂಪನಿಯು, ತಯಾರಿಕೆಯ ದಿನಾಂಕ ಹಾಗೂ ಇತರೆ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಾಗಿ ಉಂಟಾಗುವ ಇಂತಹ ಪ್ರಕರಣಗಳು ಸಾಮಾನ್ಯ ಜನರಲ್ಲಿ ಆತಂಕವನ್ನು ಉಂಟುಮಾಡುತ್ತವೆ. ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮ ಕೈಗೊಂಡು, ಈ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.