
ಮಾಡುವ ವಿಧಾನ:
1. ಮೊದಲು ಬೆಳ್ಳುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.
2. ಒಂದು ಪಾತ್ರೆಯಲ್ಲಿ 2 ಕಪ್ ಹಾಲನ್ನು ಸುರಿಯಿರಿ.
3. ಹಾಲಿನಲ್ಲಿ ಕತ್ತರಿಸಿದ ಬೆಳ್ಳುಳ್ಳಿಯನ್ನು ಸೇರಿಸಿ.
4. ಹಾಲು ಮತ್ತು ಬೆಳ್ಳುಳ್ಳಿಯನ್ನು ತೀವ್ರ ತಾಪದಲ್ಲಿ ಕುದಿಯಲು ಬಿಡಿ.
5. ಬೆಳ್ಳುಳ್ಳಿ ಚೆನ್ನಾಗಿ ಬೇಯಿದ ನಂತರ ಅದನ್ನು ಮ್ಯಾಶ್ ಮಾಡಿ.
6. ಮ್ಯಾಶ್ ಮಾಡಿದ ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ.
7. ಬಳಿಕ, ಅದಕ್ಕೆ ಕಾಳುಮೆಣಸಿನ ಪುಡಿ, ಅರಿಶಿನ ಪುಡಿ ಸೇರಿಸಿ.
8. ಸ್ವಲ್ಪ ಪಾಮ್ ಶುಗರ್ ಕೂಡ ಸೇರಿಸಿ, ಚೆನ್ನಾಗಿ ಕಲೆಹಾಕಿ.
9. ಹಾಲು ಚೆನ್ನಾಗಿ ಕುದಿದ ನಂತರ ಅದನ್ನು ಬಿಸಿ ಬಿಸಿ ಸೇವಿಸಿ.
ಆರೋಗ್ಯ ಪ್ರಯೋಜನಗಳು:
– ಕೀಲು ನೋವು, ವಾಯು, ಮತ್ತು ಕಾಲು ನೋವು ಕಡಿಮೆಯಾಗಲು ಸಹಾಯ.
– ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ.
– ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು:
– 10 ಎಸಳು ಬೆಳ್ಳುಳ್ಳಿ
– 2 ಕಪ್ ಹಾಲು
– 1/2 ಟೀ ಚಮಚ ಕಾಳುಮೆಣಸಿನ ಪುಡಿ
– 1/2 ಟೀ ಚಮಚ ಅರಿಶಿನ ಪುಡಿ
– 1 ಟೇಬಲ್ ಸ್ಪೂನ್ ಪಾಮ್ ಶುಗರ್