March 15, 2025

ಶಿವಮೊಗ್ಗ ಜಿಲ್ಲೆ: ರಸ್ತೆ ಅಪಘಾತದಲ್ಲಿ ಯುವಕನ ಸಾವು…..

Spread the love



ಶಿವಮೊಗ್ಗ: 01/07/2024

ಕಳೆದ ದಿವಸ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ-ಸವಳಂಗ ರಸ್ತೆ, ಹಿಟ್ಟೂರು ಕ್ರಾಸ್ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ 28 ವರ್ಷದ ಜಗದೀಶ ಕೆ ಎಂಬ ಯುವಕ ಮೃತ ಪಟ್ಟ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕದ ಕೊಡತಾಳು ಗ್ರಾಮದಲ್ಲಿ ವಾಸವಾಗಿದ್ದ ಜಗದೀಶ, ತಮ್ಮ ಬೈಕ್‌ನಲ್ಲಿ ಹಾರನಹಳ್ಳಿ ಬ್ಯಾಂಕಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.



ಮಧ್ಯಾಹ್ನ 12.30 ಗಂಟೆ ಸುಮಾರಿಗೆ ಜಗದೀಶ, ಸವಳಂಗ ಕಡೆಯಿಂದ ಹಾರನಹಳ್ಳಿ ಕಡೆಗೆ ತೆರಳುತ್ತಿದ್ದಾಗ, ಎದುರುಗಡೆಯಿಂದ ಬರುತ್ತಿದ್ದ ಓಮಿನಿ ಕಾರು (ಕೆ.ಎ.19.ಎಮ್.ಎಫ್.2851) ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ನಡೆಸಿದ ಚಾಲಕನು, ಜಗದೀಶನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಜಗದೀಶ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಬೈಕ್ ಮುಂಭಾಗ ಸಂಪೂರ್ಣ ಜಕಂಗೊಂಡಿದ್ದು, ಓಮಿನಿ ಕಾರಿನ ಚಾಲಕನಿಗೂ ಗಾಯವಾಗಿದೆ.

ಘಟನೆಯ ಸ್ಥಳದಲ್ಲಿ ನಾಗರಾಜನಾಯ್ಕ ಎಂಬ ವ್ಯಕ್ತಿ ಈ ಘಟನೆ ಕುರಿತ ವಿವರವನ್ನು ಕೊಟ್ಟಿದ್ದು, ಸ್ಥಳೀಯರು ತಕ್ಷಣ ಓಮಿನಿ ಚಾಲಕನನ್ನು ಆಸ್ಪತ್ರೆಗೆ ಕಳುಹಿಸಿದ್ದು, ಮೃತದೇಹವನ್ನು ಪೋಸ್ಟ್ಮಾರ್ಟಂಗಾಗಿ ಕಳುಹಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಓಮಿನಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.