March 14, 2025

ಎರಡು ವರ್ಷದಿಂದಲು ಶಿಥಿಲ ಸ್ಥಿತಿ ಯಲ್ಲಿರುವ ಐತಿಹಾಸಿಕ ಕಲ್ಯಾಣಿ…!? 

Spread the love

ಚಿಕ್ಕನಾಯನಹಳ್ಳಿ :

ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಇರುವ ಐತಿಹಾಸಿಕ ಮುಜುರಾಯಿ ಇಲಾಖೆಗೆ ಸೇರಿದ ಹಳೆಯ ಆಂಜನೇಯ ಸ್ವಾಮಿಯ ದೇವಾಲಯದ ಹಿಂದೆ ಇರುವ ಐತಿಹಾಸಿಕ ಕಲ್ಯಾಣಿ ಶಿಥಿಲಗೊಂಡು ಎರಡು ವರ್ಷ ಕಳೆದಿದೆ. ಈ ಅವಧಿಯಲ್ಲಿ ಯಾವುದೇ ಕ್ರಮವನ್ನು ತಾಲ್ಲೂಕಿನ ಮುಜುರಾಯಿ ಇಲಾಖೆ ಕೈಗೊಳ್ಳದೆ ಇರುವುದು ಭಕ್ತರಿಗೆ ದೊಡ್ಡ ನಿರಾಸೆಯನ್ನುಂಟುಮಾಡಿದೆ.

ಇತ್ತೀಚೆಗೆ ಸರ್ಕಾರವು ಎಲ್ಲಾ ಐತಿಹಾಸಿಕ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲು ಆದೇಶ ನೀಡಿದರೂ, ಇಲ್ಲಿ‌ನ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇದ್ದಾರೆ. ಪವಿತ್ರ ಸ್ಥಳಗಳಾದ ದೇವಾಲಯಗಳ ಬಿನ್ನಹಗಳಲ್ಲಿ ಈ ರೀತಿಯ ನಿರ್ಲಕ್ಷ್ಯವು ಅಪರಾಧವೇ ಸರಿ. ಭಕ್ತರು ದೇವಾಲಯಕ್ಕೆ ಭೇಟಿ ನೀಡಿದಾಗ, ಪರಿಸರವನ್ನು ಸ್ವಚ್ಛವಾಗಿ  ನೋಡಲು ಬಯಸುತ್ತಾರೆ.

ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ. ಮುಜುರಾಯಿ ಇಲಾಖೆಯು ತ್ವರಿತವಾಗಿ ಕ್ರಮಕೈಗೊಂಡು, ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮತ್ತು ಪುನಃಸ್ಥಾಪಿಸಲು ಅಗತ್ಯವಿರುವ ಎಲ್ಲ ಬಗೆಗಳ ನವೀಕರಣ ಕಾರ್ಯಗಳನ್ನು ಮಾಡಬೇಕು. ಕಲ್ಯಾಣಿಯ ಪುನಶ್ಚೇತನದಿಂದ ಈ ಪ್ರದೇಶವು ಸ್ವಚ್ಛತೆ ಮತ್ತು ಆಕರ್ಷಣೀಯತೆಯನ್ನು ಹೊಂದಿ, ಭಕ್ತರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದುವ ಸ್ಥಳವಾಗಿ ಇರುವುದು ಮಹತ್ವದ್ದಾಗಿದೆ.