
ದೆಹಲಿ :
ದೆಹಲಿ ಯಲ್ಲಿ ನಡೆದ ದಾರುಣ ಘಟನೆಯು ಎಲ್ಲರ ಮನಸ್ಸನ್ನು ಕಲುಷಿತಗೊಳಿಸಿದೆ. ದೆಹಲಿಯ ನೀರಜ್ ಸೋಲಂಕಿ ಎಂಬ ವ್ಯಕ್ತಿ ತನ್ನ ಹೆಣ್ಣು ಶಿಶುಗಳನ್ನು ಹೂತು ಹಾಕಿದ ಪ್ರಕರಣ ಬಹಳ ಆಘಾತಕಾರಿ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಹಾಗೂ ಮಕ್ಕಳ ಅಜ್ಜನನ್ನು ಬಂಧಿಸಿದ್ದಾರೆ.
ಮೂಲತಃ ಹರ್ಯಾಣದ ರೋಟಕ್‌ನ ಪೂಜಾ ಎಂಬ ಮಹಿಳೆ ಜೂನ್ 5 ರಂದು ಅವಳಿ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ನೀರಜ್ ಸೋಲಂಕಿ, ಅವಳಿ ಹೆಣ್ಣು ಶಿಶುಗಳನ್ನು ಕದ್ದೊಯ್ಯಲು ನಿರ್ಧರಿಸಿದ. ತಂದೆ ಎಂಬ ತಾತಸ್ತಿಕತೆಯನ್ನು ತೊರೆದು, ಆ ಕಂದಮ್ಮಗಳನ್ನು ಜೀವಂತವಾಗಿ ಮಣ್ಣಿನಲ್ಲಿ ಹೂತು ಹಾಕಿದನು.
ಈ ಘಟನೆ ಬೆಳಕಿಗೆ ಬಂದಿದ್ದು, ಮಣ್ಣಿನಿಂದ ಇಬ್ಬರು ಶಿಶುಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ , ಈ ಪ್ರಕರಣದಲ್ಲಿ ನೀರಜ್ ಸೋಲಂಕಿ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ಇಂತಹ ಭೀಕರ ಘಟನೆಗಳು ನಮ್ಮ ಸಮಾಜದಲ್ಲಿ ನಡೆದುಯುತ್ತಿರುವುದು ದುರದೃಷ್ಟಕರ. ಹೆಣ್ಣು ಮಕ್ಕಳನ್ನು ಕೊಲ್ಲುವುದು ಅನೈತಿಕ ಮತ್ತು ಅಪರಾಧವಾಗಿದ್ದು, ಇದಕ್ಕೆ ಸಂಬಂಧಪಟ್ಟ ಕಾನೂನು ಕ್ರಮಗಳು ಕಠಿಣವಾಗಿರಬೇಕು. ಸರ್ಕಾರ ಮತ್ತು ಸಮಾಜ ಇಂತಹ ಘಟನೆಯನ್ನು ತಡೆಯಲು ಶಕ್ತಿ ಯುತ ಕಾನೂನು ಕ್ರಮಗಳನ್ನು ಜಾರಿಗೆ ತರುವುದರ ಜೊತೆಗೆ, ಜನರಲ್ಲಿ ಜಾಗೃತಿ ಮೂಡಿಸಲು ಕಟು ಪ್ರಯತ್ನ ಮಾಡಬೇಕು.
ಹೆಣ್ಣುಮಕ್ಕಳನ್ನು ಗೌರವದಿಂದ ನಡೆಸಲು ಮತ್ತು ಹೆಣ್ಣುಮಕ್ಕಳ ಜೀವನದ ಹಕ್ಕನ್ನು ಕಾಪಾಡಲು ಎಲ್ಲರೂ ಸಹಕರಿಸಬೇಕು. ಇಂತಹ ಅಮಾನವೀಯ ಕೃತ್ಯಗಳ ವಿರುದ್ಧ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.