March 14, 2025

ಒಂಟಿ ವಾಸವಿದ್ದ ಮಹಿಳೆ ಕೊಲೆ ಮಾಡಿ ಚಿನ್ನಾಭರಣ ಕಳವು

Spread the love

ಬೆಂಗಳೂರು: ಒಂಟಿಯಾಗಿ ವಾಸವಾಗಿದ್ದ ಮಹಿಳೆಯನ್ನು ಕೊಲೆಗೈದಿರುವ ದುಷ್ಕರ್ಮಿಗಳು, ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಡಿಗೇಹಳ್ಳಿಯ ಗಣೇಶನಗರ ನಿವಾಸಿ ಎಂ. ಶೋಭಾ (48) ಕೊಲೆಯಾದವರು.

ಬಳಿಕ ದುಷ್ಕರ್ಮಿಗಳು ಆಕೆಯ ಮೈಮೇಲಿದ್ದ ಚಿನ್ನದ ಸರಗಳು, ಮೊಬೈಲ್‌, ಮನೆ ಮುಂಭಾಗ ನಿಂತಿದ್ದ ಕಾರು ಸಮೇತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಹೀಗಾಗಿ ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದರು.

ಮೃತ ಶೋಭಾ, 2 ಮಗಳ ಜತೆ ವಾಸವಿದ್ದರು. ಪುತ್ರಿಗೆ ಇತ್ತೀಚೆಗೆ ಮದುವೆಯಾಗಿದ್ದು, ಏ.18ರಂದು ಮಗಳು ಹರ್ಷಿತಾ, ಜೆ.ಪಿ.ನಗರದಲ್ಲಿರುವ ತಮ್ಮ ಗಂಡನ ಮನೆಗೆ ಹೋಗಿದ್ದರು. ಮರುದಿನ ತಾಯಿ ಶೋಭಾಗೆ ಕರೆ ಮಾಡಿದ್ದರು. ಆದರೆ, ತಾಯಿ ಕರೆ ಸ್ವೀಕರಿಸಿರಲಿಲ್ಲ. ಗಾಬರಿಗೊಂಡು ಅಕ್ಕ ಸುಪ್ರಿಯಾ ಹಾಗೂ ತಂದೆ ಶಂಕರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಬಳಿಕ ಗಾಬರಿಗೊಂಡು ಅಕ್ಕ ಸುಪ್ರಿಯಾ ತಾಯಿ ಮನೆಗೆ ಹೋಗಿ ನೋಡಿದಾಗ, ಬೆಡ್‌ ಮೇಲೆ ಶೋಭಾ ಮೃತದೇಹ ಕಂಡಿತ್ತು. ಅಲ್ಲದೆ, ಶೋಭಾ ಮೈ ಮೇಲಿನ ಚಿನ್ನಾಭರಣ, ಕಾರು ಇರಲಿಲ್ಲ ಎಂದು ಪೊಲೀಸರು ಹೇಳಿದರು.