March 14, 2025

ಶಿವ ತಾಂಡವ ನೃತ್ಯ ಸಂಸ್ಥೆಯ ಸಂಸ್ಥಾಪಕ ಸಚಿನ್ ರವರಿಗೆ ಗೋಲ್ಡನ್ ಕೊರಿಯೋಗ್ರಾಫರ್ ಅವಾರ್ಡ್ಮ ಮತ್ತು ಶೋ ಸ್ಟಾರ್ ಅವಾರ್ಡ್….

Spread the love

ಬೆಂಗಳೂರು ನಗರದ ವಾವ್ ಸಿನಿಮಾ ಹಾಗೂ ಸೂಪರ್ ಕಿಡ್ಸ್ ಚಾನೆಲ್ ನಲ್ಲಿ ಆಯೋಜಿತ *ವಾವ್ ಕರ್ನಾಟಕ ಡ್ಯಾನ್ಸ್* ಟಿವಿ ರಿಯಾಲಿಟಿ ಶೋ ಅಲ್ಲಿ ಶಿವಮೊಗ್ಗದ ಶಿವ ತಾಂಡವ ನೃತ್ಯ ಸಂಸ್ಥೆಯ ಸಂಸ್ಥಾಪಕರಾದ ಸಚಿನ್ ರವರಿಗೆ ಗೌರವದ *ಗೋಲ್ಡನ್ ಕೊರಿಯೋಗ್ರಾಫರ್ ಅವಾರ್ಡ್* ಹಾಗು *ಶೋ ಸ್ಟಾರ್ ಅವಾರ್ಡ್* ಲಭಿಸಿದೆ. ಇದು ನೃತ್ಯ ಕ್ಷೇತ್ರದಲ್ಲಿ ಅವರ ಪರಿಶ್ರಮ ಮತ್ತು ಪ್ರೌಢತೆಗೆ ಸಲ್ಲಿಸಿದ ಮಹತ್ತರವಾದ ಪ್ರಶಂಸೆಯಾಗಿದೆ.


ಈ ನೃತ್ಯ ಸಂಸ್ಥೆಯ ಮಕ್ಕಳಾದ ದೀಕ್ಷಾ, ರೂಹಿ, ತನಿಹ ಹಾಗೂ ಅಭಿಶ್ರೀ, ಅವರುಗಳ ಪ್ರತಿಭೆಯ ಹೊರತಾಗಿಯೂ, *ವಾವ್ ಕರ್ನಾಟಕ ಡ್ಯಾನ್ಸ್* ರಿಯಾಲಿಟಿ ಶೋಗೆ ಆಯ್ಕೆಯಾಗಿ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಕೀರ್ತಿಯ ತಂಗಾಳಿ ಹಾಸಿದ್ದಾರೆ. ಇದು ಸಂಸ್ಥೆಯ ಸಾಧನೆ ಮಾತ್ರವಲ್ಲ, ಈ ಮಕ್ಕಳ ಭವಿಷ್ಯವನ್ನು ಬೆಳಗಿಸುವ ಸುವರ್ಣಾವಕಾಶವೂ ಆಗಿದೆ.

ಶಿವ ತಾಂಡವ ನೃತ್ಯ ಸಂಸ್ಥೆಯು ಇದುವರೆಗೆ ಅನೇಕ ಪ್ರತಿಭಾವಂತ ಕಲಾವಿದರನ್ನು ತಯಾರು ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ಸಂಸ್ಥೆಯ ಯಶಸ್ಸು ಕೂಡಿದ ಸಂತೋಷದ ಕ್ಷಣವು ಅವರ ಪರಿಶ್ರಮಕ್ಕೆ ಪೂರಕವಾಗಿದೆ. ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯವಿರುವ ಶಿಸ್ತು, ಸಮರ್ಪಣೆ, ಮತ್ತು ಕಲಿಕೆಯ ಧೀಶಕ್ತಿಯನ್ನು ಈ ಸಂಸ್ಥೆಯು ಮಕ್ಕಳಲ್ಲಿ ಬೆಳೆಸಲು ಮಡಿದಿದ್ದಾರೆ.



ಈಗ ಈ ಸಂಸ್ಥೆಯ ಮಕ್ಕಳು ಕನ್ನಡಿಗರ ಹೃದಯಗಳಲ್ಲಿ ತಮ್ಮ ನೃತ್ಯದ ಮೂಲಕ ವಿಶೇಷ ಸ್ಥಾನ ಪಡೆದಿದ್ದಾರೆ. ಇಂತಹ ಮೆಚ್ಚುಗೆಗಳು ಮತ್ತು ಪ್ರಶಂಸೆಗಳು ನೃತ್ಯ ಕಲಾವಿದರು ಮತ್ತು ಗುರುಗಳ ಕಠಿಣ ಪರಿಶ್ರಮದ ಫಲ.

ಶಿವ ತಾಂಡವ ನೃತ್ಯ ಸಂಸ್ಥೆ ಹಾಗೂ ಅದರ ಭರವಸೆಯ ಮಕ್ಕಳು ದೀಕ್ಷಾ, ರೂಹಿ, ತನಿಹ ಮತ್ತು ಅಭಿಶ್ರೀ ಇವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳು ಯಶಸ್ವಿಯಾಗಲಿ ಮತ್ತು ಇನ್ನೂ ಹೆಚ್ಚಿನದನ್ನು ಸಾಧಿಸಲು ಎಲ್ಲಾ ಶುಭಾಶಯಗಳು.