
ಚೇಳೂರು: ಉಳುಮೆ ಮಾಡಲು 14 ಎತ್ತುಗಳನ್ನು ಕೊಂಡೊಯ್ಯುತ್ತಿದ್ದ ರೈತರ ಕ್ಯಾಂಟರ್ ಮೇಲೆ ಏಕಾಏಕಿ ದಾಳಿ ನಡೆಸಿದ ಪ್ರಾಣಿ ದಯಾ ಸಂಘ ಮತ್ತು ಬಜರಂಗದಳದ ನಾಲ್ವರು ಕಾರ್ಯಕರ್ತರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸಂಜೆ ನಂಜನಗೂಡು ಸಂತೆಯಿಂದ ಗದಗ ಜಿಲ್ಲೆಯ ಹಳ್ಳಿಗಳಿಗೆ ಸಾಗಿಸುತ್ತಿದ್ದ ರೈತರ ಎತ್ತುಗಳನ್ನು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಾಗಿಸುತ್ತಿದ್ದಾರೆ ಎಂದು ಅನುಮಾನಗೊಂಡು , ವಾಹನವನ್ನು ತಡೆದು ಪೊಲೀಸ್ ಠಾಣೆಗೆ ವಶಕ್ಕೆ ನೀಡಿದರು.

ಸ್ಥಳೀಯರು ಮತ್ತು ಸಂಘಟನೆಯ ಕಾರ್ಯಕರ್ತರ ನಡುವೆ ಮಾತುಕತೆ ನಡೆದ ನಂತರ, ಗದಗ ರೈತರು ಎಂದು ಸ್ಪಷ್ಟವಾಯಿತು. ಗದಗ ಜಿಲ್ಲೆಯ ಶಾಸಕರು ಮತ್ತು ಸಂಸದರಿಂದ ಸ್ಥಳೀಯ ರೈತರು ಕರೆ ಮಾಡಿದ್ದು, ಎತ್ತುಗಳನ್ನು ಕೊಂಡೊಯ್ಯುತ್ತಿದ್ದ ರೈತರ ದಾಖಲೆಗಳು ಪರಿಶೀಲನೆಗೊಳಗಾದವು. ಅಲ್ಲದೆ, ಗದಗ ಹತ್ತಿರ ಇರುವ ಗ್ರಾಮಗಳಲ್ಲಿ ತನಿಖೆ ನಡೆಸಿದಾಗ, ಅವರು ಸ್ಥಳೀಯ ರೈತರೆಂದು ತಿಳಿದುಬಂದರೂ, ಸಂಘಟನೆಯ ಕಾರ್ಯಕರ್ತರು ಅವರನ್ನು ಬಿಡುಗಡೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿಸಿದರು. ಇದರಿಂದ ಸ್ಥಳೀಯ ರೈತರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಅಮಾಯಕ ರೈತರನ್ನು ಈ ರೀತಿಯಾಗಿ ನಡೆಸಿಕೊಂಡಿರುವುದಲ್ಲದೆ, ಎತ್ತುಗಳಿಗೆ ಬೆಳಿಗ್ಗೆಯಿಂದ ಮೇವು ಮತ್ತು ನೀರು ನೀಡದಿರುವುದನ್ನು ಅವರ ಗಮನಕ್ಕೆ ತಂದರು.

ಚೇಳೂರಿನ ರೈತ ಮುಖಂಡ ಶಿವನೇಹಳ್ಳಿ ಸುರೇಶ್, “ಹಿಂಸೆ ಕೊಡುವುದು ಇಂತಹ ಸಂಘಟನೆಗಳಿಗೆ ಶೋಭೆ ತರುವುದಿಲ್ಲ. ಬದಲಾಗಿ, ರೈತರಲ್ಲಿ ದ್ವೇಷ ಭಾವನೆ ಬೆಳೆಯುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶಿವಕುಮಾರ್ ರವರು ಕೂಡ ಪೊಲೀಸ್ ಠಾಣೆಗೆ ಬಂದು, ಸಂಘಟನೆಯ ಅಧ್ಯಕ್ಷ ಮಂಜು ಭಾರ್ಗವ್ ತರುಣ್ ಅವರಿಗೆ ಬುದ್ಧಿ ಮಾತು ಹೇಳಿದರು. ಆದರೆ, ಸಂಘಟನೆಯ ಕಾರ್ಯಕರ್ತರು ತಮ್ಮ ದಬ್ಬಾಳಿಕೆ ಮುಂದುವರಿಸಿದರು.
ಮಧ್ಯರಾತ್ರಿ ಚೇಳೂರಿನ ಸಾರ್ವಜನಿಕರು ರೈತರು ಸಂಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎತ್ತುಗಳನ್ನು ಕ್ಯಾಂಟರ್ ನಿಂದ ಕೆಳಗಿಳಿಸಿ, ಅವುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಿದರು. ದಿನಾಂಕ 15-6-2024 ಬೆಳಗ್ಗೆ ಸ್ಥಳೀಯ ಶಾಸಕರಾದ ವಾಸಣ್ಣನವರು, ಇನ್ಸ್‌ಪೆಕ್ಟರ್ ಗೋಪಿನಾಥ್, ಸಬ್ ಇನ್ಸ್‌ಪೆಕ್ಟರ್ ದೇವರಾಜು ಹಾಗೂ ಪಶುವೈದ್ಯಾಧಿಕಾರಿಯಾದ ಶಂಕರಪ್ಪ ನವರು ಸ್ಥಳಕ್ಕೆ ಆಗಮಿಸಿ, ಎತ್ತುಗಳನ್ನು ಪರೀಕ್ಷಿಸಿ ವರದಿ ನೀಡಿದರು.
ನಂತರ, ಎತ್ತುಗಳನ್ನು ಚೇಳೂರಿನ ಸಾರ್ವಜನಿಕರು, ಜಯ ಕರ್ನಾಟಕ ಸಂಘದ ಅಧ್ಯಕ್ಷ ಕಾರ್ತಿಕೇಯನ್, ಪೊಲೀಸ್ ಠಾಣಾ ಸಿಬ್ಬಂದಿ ನೇತೃತ್ವದಲ್ಲಿ ಅವರ ಊರಿಗೆ ಕಳುಹಿಸಿದರು. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕಾರ್ತಿಕೇಯನ್, ದಲ್ಲಾಳಿ ಬಸವರಾಜು, ಮೋಹನ್ ಕುಮಾರ್, ಶಿಕ್ಷಕರು ಬಸವರಾಜು, ಸಿದ್ದರಾಜು, ತಿರುಮಲಯ್ಯ, ಸಿದ್ದರಾಮಣ್ಣ, ಮೋಹನ್, ಸಂದೇಶ್, ಆರ್ಯ ಬೋರ್ವೆಲ್ ಸಿದ್ದೇಶ್, ಜಗದೀಶ್, ಮಂಜುನಾಥ್, ಮಾಜಿ ಸೈನಿಕ ನಾಗರಾಜು, ರಂಗನಾಥ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಕುಮಾರ್ ಇತ್ಯಾದಿ ಸ್ಥಳೀಯರು ಪರಸ್ಪರ ಸಹಕಾರ ಮಾಡಿ ಸಮಸ್ಯೆಯನ್ನು ಬಗೆಹರಿಸಿದರು… ✍️✍️✍️