
ಚಿಕ್ಕಮಗಳೂರು ನಗರದಲ್ಲಿ ಇ-ಸ್ವತ್ತು ಸೇವೆಗಾಗಿ ಲಂಚ ಪಡೆಯಲು ಯತ್ನಿಸಿದ್ದ ನಗರಸಭೆ ವಾರ್ಡ್ 2ರ ಬಿಲ್ ಕಲೆಕ್ಟರ್ ಪ್ರದೀಪ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಸದಾಶಿವಮೂರ್ತಿ ಎಂಬುವವರ ಬೈಪಾಸ್ ರಸ್ತೆಯ ಜಾಗದ ಇ-ಸ್ವತ್ತು ಮಾಡಿಕೊಡಲು ಪ್ರದೀಪ್ 3000 ರೂ. ಫೋನ್ ಪೇ ಮೂಲಕ ಪಡೆದುಕೊಂಡು, ನಂತರ 2000 ರೂ. ನಗದು ರೂಪದಲ್ಲಿ ಲಂಚ ಕೇಳಿದಾಗ ಲೋಕಾಯುಕ್ತರು ಪ್ರದೀಪ್ ನನ್ನು ಬಂಧಿಸಿದರು.
ಈ ಘಟನೆ ಶುಕ್ರವಾರ ನಡೆದಿದ್ದು, ರಾಕೇಶ್ ಎಂಬುವವರ ದೂರಿನ ಮೇರೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಮಲ್ಲಿಕಾರ್ಜುನ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದರು.
ಬಿಲ್ ಕಲೆಕ್ಟರ್ ಪ್ರದೀಪ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಇದರೊಂದಿಗೆ ಲೋಕಾಯುಕ್ತರ ತಂಡದಲ್ಲಿ ಅನಿಲ್ ನಾಯಕ್, ಲೋಕೇಶ್, ವಿಜಯಭಾಸ್ಕರ್, ಶ್ರೀಧರ್ ಪ್ರಸಾದ್, ಚಂದನ್ ಭಾಗವಹಿಸಿದ್ದರು.