
ಚಿತ್ರದುರ್ಗ :
ಹೊಳಲ್ಕೆರೆ ಕ್ಷೇತ್ರದ ಹಳಿಯೂರಿನಿಂದ ಕುರುಬರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಲು ಮಕ್ಕಳು ಮತ್ತು ಗ್ರಾಮಸ್ಥರು ದಿನನಿತ್ಯ ರೈಲ್ವೇ ಟ್ರಾಕ್ ದಾಟುವುದರಲ್ಲಿ ಜೀವದ ಹಂಗು ತೊರೆದು ಹೋಗಬೇಕಾದ ಸ್ಥಿತಿ ಉಂಟಾಗಿದೆ. ಹಳಿಯೂರಿನಿಂದ 50 ರಿಂದ 60 ಮಕ್ಕಳು ಕುರುಬರಹಳ್ಳಿಗೆ ಹೋಗಲು ರೈಲ್ವೇ ಟ್ರಾಕ್ ದಾಟುವುದು ಅನಿವಾರ್ಯವಾಗಿದೆ.
ಈ ರೈಲ್ವೇ ಟ್ರಾಕ್ ದಾಟುವಾಗ ಯಾವಾಗ ಟ್ರೈನ್ ಬರುತ್ತೋ ಎಂಬ ಭಯದಿಂದ ಮಕ್ಕಳೂ ಸೇರಿದಂತೆ ಎಲ್ಲಾ ಗ್ರಾಮಸ್ಥರೂ ನಿರಂತರವಾಗಿ ಆತಂಕದಲ್ಲಿರುತ್ತಾರೆ. ಮಕ್ಕಳ ಪೋಷಕರು ಹಾಗೂ ಗ್ರಾಮದ ಮುಖಂಡರು ಈ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಇಷ್ಟು ದಿನಗಳಾದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಹಳೆಯೂರಿನಿಂದ ಕುರುಬರಹಳ್ಳಿ ಶಾಲೆಗೆ ಹೋಗುವಲ್ಲಿ ಯಾವುದೇ ಅಪಾಯವಿಲ್ಲದೇ ಮಕ್ಕಳು ಸುಲಭವಾಗಿ ಹೋಗಲು ಇಲ್ಲಿನ ಗ್ರಾಮಸ್ಥರು ಮೇಲ್ವೇತುವೆ ನಿರ್ಮಿಸಲು ಆಡಳಿತದವರಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಈ ಮೇಲ್ವೇತುವೆ ನಿರ್ಮಾಣದಿಂದಾಗಿ ಮಕ್ಕಳ ಶಿಕ್ಷಣ ನಿರಾತಂಕವಾಗುತ್ತದೆ ಮತ್ತು ರೈಲ್ವೇ ಟ್ರಾಕ್ ದಾಟುವ ಭಯದಿಂದ ಬಿಡುಗಡೆಯಾಗುತ್ತಾರೆ. ಈ ಕೂಡಲೇ ಮೇಲ್ವೇತುವೆ ನಿರ್ಮಿಸಿ, ಮಕ್ಕಳ ಹಾಗೂ ಗ್ರಾಮಸ್ಥರ ಪ್ರಾಣ ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಪೇಕ್ಷಿಸುತ್ತಿದ್ದಾರೆ.
ಅಧಿಕಾರಿಗಳು ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಕ್ರಮ ಕೈಗೊಳ್ಳುವುದಾದರೆ, ಗ್ರಾಮಸ್ಥರ ಆತಂಕ ನಿವಾರಣೆಗೊಂಡು, ಮಕ್ಕಳಿಗೆ ಸುರಕ್ಷಿತ ಶಿಕ್ಷಣದ ಮುನ್ನಡೆ ಸಿಗುತ್ತದೆ.