
ಸಾತ್ವಿಕ ನುಡಿ ಪತ್ರಿಕೆಯ ವರದಿಯು ಮಹತ್ವದ ಪರಿಣಾಮವನ್ನು ಉಂಟುಮಾಡಿದೆ. ನಲ್ಲೂರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿರುವ ರಸ್ತೆಬದಿಯ ಅಪಾಯಕಾರಿ ಮರವೊಂದು ಶಿತಿಲಾ ಸ್ಥಿತಿಯಲ್ಲಿದ್ದು, ಇದು ಯಾವುದೇ ಕ್ಷಣದಲ್ಲಿ ಉರುಳಬಹುದು ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು.
ನಮ್ಮ ಪತ್ರಿಕೆಯು ಈ ವಿಷಯದ ಬಗ್ಗೆ ಸವಿವರವಾಗಿ ವರದಿ ಮಾಡಿದ ನಂತರ, ನಲ್ಲೂರು ಗ್ರಾಮಪಂಚಾಯಿತಿ ಆಡಳಿತ ಅಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳಾದ ಸತೀಶ್ ಚಂದ್ರ RFO ಗುಬ್ಬಿ ಅವರು ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ತಕ್ಷಣವೇ ಶಿತಿಲ ಸ್ಥಿತಿಯಲ್ಲಿದ್ದ ಮರವನ್ನು ತೆರವುಗೊಳಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ ಅಧಿಕಾರಿಗಳ ಈ ತ್ವರಿತ ಸ್ಪಂದನೆಗೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ನಂತರ ತುಮಕೂರು ನಗರ ವ್ಯಾಪ್ತಿಯಲ್ಲಿ ಭೀಮಸಂದ್ರ ದಿಂದ ಬೆಳ್ಳವಿ ರಸ್ತೆಯ ಬೆತ್ತಲೂರು ಗೇಟ್ ಬಳಿ ಶಿತಿಲಾ ಸ್ಥಿತಿಯಲ್ಲಿದ್ದ ಕೆಲವೊಂದು ಮರವನ್ನು ಕಡಿಸುವ ಮೂಲಕ, ಮುಂಜಾಗೃತ ಕ್ರಮವಾಗಿ ಸಂಭವಿಸಬಾಹುದಾದ ಅನಾಹುತವನ್ನು ತಡೆಯುವ ಕಾರ್ಯವನ್ನು ಇಲಾಖೆ ಕೈಗೊಂಡಿದೆ . ಈ ಕಾರ್ಯವನ್ನು ಸ್ಥಳೀಯ ಜನರು ಬಹಳ ಪ್ರಶಂಸಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳಾದ DFO ಅನುಪಮಾ H ಮತ್ತು ACF ಮಹೇಶ್ ಮಾಲಗತ್ತಿ ಹಾಗೂ RFO ಪವಿತ್ರ ಅವರ ಮಾರ್ಗದರ್ಶನದಿಂದ ಸಿಬ್ಬಂದಿಗಳ ನೇತೃತ್ವದಲ್ಲಿ ಮರ ತೆರವು ಗೊಳಿಸುವದನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ಪತ್ರಿಕೆಯ ವರದಿಯು ಸಂಬಂಧಿಸಿದ ಅಧಿಕಾರಿಗಳನ್ನು ಚುರುಕುಮಾಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಿದೆ. ಈ ಕಾರ್ಯಾಚರಣೆ ಯಶಸ್ವಿಯಾಗಿರುವುದು ಪತ್ರಿಕೆಯ ಪರಿಣಾಮಕಾರಿತ್ವವನ್ನು ಹಾಗೂ ಜನಸಾಮಾನ್ಯರ ಭದ್ರತೆಯ ಮೇಲೆ ಆಡಳಿತದ ಸ್ಪಂದನಶೀಲತೆಯನ್ನು ತೋರಿಸುತ್ತದೆ.
ಅಧಿಕಾರಿಗಳ ಈ ತ್ವರಿತ ಸ್ಪಂದನೆಗೆ ಸಾರ್ವಜನಿಕರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಸಾರ್ವಜನಿಕ ಹಿತದೃಷ್ಟಿಯ ಕಾರ್ಯಗಳು ಪ್ರೋತ್ಸಾಹಿತವಾಗಬೇಕೆಂದು ಆಕಾಂಕ್ಷಿಸಿದ್ದಾರೆ.