March 15, 2025

ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ತಿಕ್ ನೀರು ಪಾಲು…..!?

Spread the love

ಮೈಸೂರು..

ಸರಗೂರು ತಾಲ್ಲೂಕಿನ ನಗು ಜಲಾಶಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ತಿಕ್ ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಕಾರ್ತಿಕ್ ಅವರು ಶನಿವಾರ ಮಧ್ಯಾಹ್ನ ತಮ್ಮ ಸ್ನೇಹಿತರೊಂದಿಗೆ ಜಲಾಶಯದ ಹಿನ್ನೀರಿನ ಬಳಿ ಹಿಜಾಡಲು ತೆರಳಿದ್ದರು. ಈ ವೇಳೆ ಅವಗಢದಿಂದ ನೀರಿನಲ್ಲಿ ಮುಳುಗಿದ್ದು, ಸ್ನೇಹಿತರು ಮತ್ತು ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದರು ಪಲಕಾರಿಯಾಗಲಿಲ್ಲ.

ಸ್ಥಳೀಯರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಕ್ಕೆ ಕೈ ಹಾಕಿದರು. ಶೋಧ ಕಾರ್ಯದಲ್ಲಿ ಭಾಗವಹಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸೋಮಣ್ಣ, ಚಾಲಕರಾದ ದಿನೇಶ್, ಹೇಮಂತ್, ಅರುಣ್ ಕುಮಾರ್, ಮುನಿಸಿದ್ದ ನಾಯಕ, ಮಲ್ಲಿಕಾರ್ಜುನ, ಸಂಗಮೇಶ್‌ ಅವರನ್ನು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಿದರು. ಅವರ ಶ್ರಮದಿಂದ ಮೃತ ದೇಹವನ್ನು ಪತ್ತೆಹಚ್ಚಿ, ನೀರಿನಿಂದ ಹೊರತೆಗೆದು ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.

ಈ ಘಟನೆ ಸ್ಥಳೀಯರಲ್ಲಿ ಆಘಾತವನ್ನು ಉಂಟುಮಾಡಿದ್ದು, ಕಾರ್ತಿಕ್‌ ಅವರ ಕುಟುಂಬದಲ್ಲಿ ದುಃಖದ ಛಾಯೆ ಮೆರೆದಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಮುಂದುವರೆಸಿದ್ದಾರೆ.✍️✍️✍️