March 15, 2025

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಮೌಲ್ವಿ.. S P ಯವರಿಂದ ಸ್ಪಷ್ಟನೇ

Spread the love

ಚಿತ್ರದುರ್ಗ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಮೌಲ್ವಿ ಹಾಗೂ ಆಕೆ ಸಹೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.


ಅಪ್ರಾಪ್ತೆಯ ತಾಯಿ ಮಹಿಳಾ ಠಾಣೆಗೆ ನೀಡಿದ ದೂರು ಪ್ರಕಾರ, ಮೌಲ್ವಿ ಅಪ್ರಾಪ್ತೆಗೆ ಪಾಠ ಹೇಳಿಕೊಡುವ ನೆಪದಲ್ಲಿ ಅವಳಿಗೆ ಆನಾರೋಗ್ಯವಿದೆ ಎಂದು ನಂಬಿಸಿ, ಪೂಜೆ ಮಾಡಿಸಿದರೆ ಅದು ಸರಿಯಾಗುತ್ತದೆ ಎಂದು ಹೇಳಿ ಅವಳ ಸಹೋದರನ ಸಹಕಾರದೊಂದಿಗೆ ಅತ್ಯಾಚಾರವೆಸಗಿದ್ದಾನೆ.

ಈ ಕುರಿತು ದೂರು ಪಡೆದ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಮೌಲ್ವಿ ಮತ್ತು ಅಪ್ರಾಪ್ತೆಯ ಸಹೋದರರನ್ನು ವಶಕ್ಕೆ ಪಡೆದಿದ್ದಾರೆ.

ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು, “ಇಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇಂತಹ ಘಟನೆಗಳನ್ನು ತಡೆಯಲು ಜನರು ಜಾಗರೂಕರಾಗಿರಬೇಕು ಮತ್ತು ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು” ಎಂದು ಕರೆ ನೀಡಿದರು.

ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಹೆಚ್ಚಿನ ತನಿಖೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಈ ಘಟನೆ ಕಾನೂನು ಅನುಸರಣೆ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ವದ ವಿಚಾರವಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ನ್ಯಾಯಾಲಯದಲ್ಲಿ ನ್ಯಾಯದ ಸಹಾಯಕ್ಕಾಗಿ ಆಕೆಯ ತಾಯಿ ಹಾಗೂ ಕುಟುಂಬದವರು ನಿರೀಕ್ಷೆಯಲ್ಲಿದ್ದಾರೆ.✍️✍️✍️