

ಮಳೆಗಾಲ ಶುರುವಾಗಿದೆ.. ಪೂರ್ವ ಮುಂಗಾರು ಮಳೆಗೆ ತುಮಕೂರು ಮತ್ತು ಹಾಗಲವಾಡಿ ಮುಖ್ಯ ರಸ್ತೆಯಲ್ಲಿ ಸಾತೇನಹಳ್ಳಿಗೇಟ್ ಹತ್ತಿರ ರಸ್ತೆಯ ಪಕ್ಕದಲ್ಲಿರುವ ಒಣಗಿದ ಆಲದ ಮರವು ಸಾರ್ವಜನಿಕರಿಗೆ ಭಯ ಹುಟ್ಟಿಸುವಂತಿದೆ .
ಅಳಿವಿನಂಚಿನಲ್ಲಿರೋ ಮರಗಳ ತೆರವು ಮಾಡಲು ವಲಯವಾರು ಮರ ಒಣಗಿದ್ರೇ ಕೊಂಬೆ ಬೀಳೋತರ ಇದ್ರೇ ತಕ್ಷಣವಾಗಿ ಅದನ್ನ ನಾವು ಕ್ಲೀಯರ್ ಮಾಡ್ತಿವಿ ಅಂದ್ರು ಅರಣ್ಯ ಇಲಾಖೆಯವರು
ಅದರೆ ಆಲದ ಮರ ಒಣಗಿರುವುದನ್ನು ಗ್ರಾಮ ಪಂಚಾಯತಿಯವರು ಸ್ಥಳ ಪರಿಶೀಲಿಸಿ ಅರಣ್ಯ ಇಲಾಖೆಯವರಿಗೆ ದೂರನ್ನು ನೀಡಬೇಕಿತ್ತು ಆದರೂ ಗ್ರಾಮ ಪಂಚಾಯಿತಿ ಅಧಿಕಾರಿಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದು ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ನಾವು ನಮ್ಮ ಪತ್ರಿಕೆ ವತಿಯಿಂದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮರವನ್ನು ತೆಗೆಯಲು ಮನವಿ ಮಾಡಿಕೊಂಡಿದ್ದರು ಕ್ಯಾರೆ ಅನ್ನದ ನಲ್ಲೂರು ಗ್ರಾಮ ಪಂಚಾಯತಿಯ ಪಿಡಿಒ.

ಸಾತೇನಹಳ್ಳಿ ಮತ್ತು ನಂಧೀಹಳ್ಳಿ ಮದ್ಯದಲ್ಲಿ ಇರುವ ಆಲದ ಮರ.
ನಲ್ಲೂರು ಗ್ರಾಮ ಪಂಚಾಯತಿಯವರು ಇನ್ನೂ ನಿದ್ದೆಯಿಂದ ಎದ್ದಿಲ್ಲ ಅನ್ಸುತ್ತೆ, ಹೌದು, ಇದು ಎಲ್ಲೋ ದೂರುದಲ್ಲಿ ಇರೋ ರಸ್ತೆಯಲ್ಲ ಚೇಳೂರು ತುಮಕೂರು ಮುಖ್ಯ ರಸ್ತೆಯಾಗಿದ್ದು ದಿನಪೂರ್ತಿ ಸಾವಿರಾರು ವೆಹಿಕಲ್ ಗಳು ಮತ್ತು ಹಳ್ಳಿಯ ರೈತರುಗಳು ನಡೆದುಕೊಂಡೆ ಹೋಗುತ್ತಾರೆ.
ಇದು ತುಮಕೂರು ಚೇಳೂರು ಮುಖ್ಯ ರಸ್ತೆ ಎಂದು ಗ್ರಾಮ ಪಂಚಾಯಿತಿಗೆ ಗೊತ್ತಿದ್ದರೂ ಆಲದ ಮರ ಬಿದ್ದು ಹೋದರು ಸಾರ್ವಜನಿಕರ ಜೀವ ತಾನೆ ಹೋಗುವುದು ನಮ್ಮ ಜೀವವಲ್ಲ ಎಂದು ಸುಮ್ಮನೆ ಕೂತಿರುವ ಪಿಡಿಒ ಅವರು ಇದಕ್ಕೆ ತಾಜಾ ಉದಾಹರಣೆಯಂತೆ
01.06.24 ರಂದು ರಾತ್ರಿ ಸಮಯದಲ್ಲಿ ಪಕ್ಕದ ಹೊಸಕೆರೆ ಗ್ರಾಮ ಪಂಚಾಯತಿಯ ವ್ಯಾಪ್ತಿಯ ರಸ್ತೆಯಲ್ಲಿರುವ ಮರವು ಫೋಟೋ ಗ್ರಾಪರ್ ಸುರೇಶ್ ಎಂಬುವರ ಮೇಲೆ ಬಿದ್ದಿದೆ ಆಗಿರುವ ಅನಾಹುತಕ್ಕೆ ಹೊಣೆಗಾರರು ಯಾರು ……?

ನೋಡಿದ್ರಲ್ಲ ಹೇಗೆ ಮರ ಮೇಲೆ ಬಿದ್ದಿದೆ ಅಂತಾ.. ಇದರಿಂದಾಗಿ ಹಾನಿಯಾಗ್ತಿದ್ದು, ಯಾವ ಸಮಯದಲ್ಲಾದ್ರೂ ಆಲದ ಮರ ಬಿದ್ದು ರಸ್ತೆಯ ಮೇಲೆ ಓಡಾಡುವರ ಮೇಲೆ ಬಿದ್ರೇ ಯಾರು ಹೊಣೆ…..! ಅವರ ಕುಟುಂಬಕ್ಕೆ ಯಾರು ಆಸರೆ. ಭಯವಾಗುತ್ತೆ, ಅಧಿಕಾರಿಗಳು ಅನಾಹುತ ಅದ್ಮೇಲೆನೇ ಇದನ್ನೇಲ್ಲ ಸರಿ ಮಾಡೋದು ಅಲ್ಲಿವರೆಗೆ ಏನೂ ಕೆಲಸ ಮಾಡೋದಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ..
ಒಟ್ನಲ್ಲಿ, ಗ್ರಾಮ ಪಂಚಾಯತಿ ಪಿಡಿಒ ಅವರೇ ಪಕ್ಕದ ಪಂಚಾಯತಿಯಲ್ಲಿ ಮರ ಬಿದ್ದು ಕಾಲು ಕಳೆದುಕೊಂಡ ವ್ಯಕ್ತಿಯನ್ನು ನೋಡಿ…!
ಗ್ರಾಮ ಪಂಚಾಯತಿ ಪಿಡಿಒ ಅವರು ಪಕ್ಕದ ಪಂಚಾಯತಿಯಲ್ಲಿ ಮರ ಬಿದ್ದು ಕಾಲು ಕಳೆದುಕೊಂಡಿರುವ ಘಟನೆ ನೋಡಿದ್ರು ನೋಡದಂತೆ ಇದ್ದಾರೆ.
ಸದ್ಯಕ್ಕೆ ಏನೂ ಆಗಿಲ್ಲವಾಲ್ಲ, ಮರದ ಬಿದ್ದಾಗ ನೋಡೋಣ ಅಂತಿದ್ದಾರೇನೋ ಗೊತ್ತಿಲ್ಲ….. ಮಾನ್ಯ E O ತಾಲ್ಲುಕು ಪಾಂಚಯತ್ ಅವರು ಇದಕ್ಕೆ ಏನ್ ಆಕ್ಷನ್ ತಗೋತ್ತಾರೆ ಕಾದುನೋಡೋಣ….